ವಾಷಿಂಗ್ಟನ್ : ಅಮೆರಿಕವು ಭಾರತದೊಂದಿಗೆ ಇದೆ. ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಅಮೆರಿಕ ಭಲವಾಗಿ ಖಂಡಿಸುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ ಎಂದು ವಕ್ತಾರೆ ಟಾಮಿ ಬ್ರೂಸ್ ಶುಕ್ರವಾರ ಹೇಳಿದ್ದಾರೆ.
ಕಾಶ್ಮೀರದ ಪಹಲ್ಕಾಮ್ ಭಯೋತ್ಪಾದಕ ದಾಳಿಯ ನಂತರದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಗುವಿನ ವಾತಾವರಣ ಕುರಿತು ಪಾಕಿಸ್ತಾನಿ ಪತ್ರಕರ್ತನೊಬ್ಬ ಟಾಮಿ ಬ್ರೂಸ್ ಅವರನ್ನು ಪ್ರಶ್ನಿಸಿದ್ದರು. ಪತ್ರಕರ್ತನ ಪ್ರಶ್ನೆಗೆ ಉತ್ತರಿಸಿದ ಬ್ರೂಸ್ ಅವರು, ‘ಅಮೆರಿಕವು ಭಾರತದೊಂದಿಗೆ ಇದೆ ಎಂದು ಟ್ರಂಪ್ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಈ ವಿಷಯದಲ್ಲಿ ಹೆಚ್ಚಿನದೇನೂ ನಾನು ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದಾಳಿಯಲ್ಲಿ ಮಡಿದವರಿಗೆ ನಮ್ಮ ಸಂತಾಪಗಳು. ನೊಂದ ಕುಟುಂಬಗಳ ಪರವಾಗಿ ನಮ್ಮ ಪ್ರಾರ್ಥನೆ ಇದೆ. ಗಾಯಗೊಂಡವರು ಬೇಗನೆ ಗುಣಮುಖರಾಗಲಿ ಎಂದು ಆಶಿಸುತ್ತೇವೆ. ಇಂಥ ಹೀನ ಕೃತ್ಯ ಎಸಗಿದವರನ್ನು ಕಾನೂನಿ ಎದುರು ತರಬೇಕು ಎಂದು ತಿಳಿಸಿದ್ದಾರೆ.
ಏ. 22ರಂದು ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಬಳಿಯ ಬೈಸರನ್ ಎಂಬಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದು, 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.