ಚಿತ್ರದುರ್ಗ: ಎಸ್. ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ (ರಿ) ಸೀಬಾರ, ಚಿತ್ರದುರ್ಗ ತಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯ ಹೋರಾಟಗಾರಾದ, ರಾಷ್ಟ್ರನಾಯಕ ಎಸ್. ನಿಜಲಿಂಗಪ್ಪ ಅವರ ನೂರ ಇಪ್ಪತ್ತೂರನೇ ಜನ್ಮದಿನಾಚರಣೆ ಹಮ್ಮಿಕೊಳ್ಳಲಾಗಿದೆ.
ನಾಳೆ ಡಿ. 10ರ ಮಂಗಳವಾರದಂದು ಸಿಬಾರದ ಬಳಿಯ ಎಸ್. ಎನ್ ಸ್ಮಾರಕದ ಅವರಣದ “ಪುಣ್ಯಭೂಮಿಯಲ್ಲಿ ಪುಷ್ಪ ನಮನ ಕಾರ್ಯಕ್ರಮವನ್ನು ಬೆಳಿಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಎಸ್.ಎನ್. ಮೆಮೋರಿಯಲ್ ಟ್ರಸ್(ರಿ)ನ ಸಂಯೋಜಕರು ಹಾಗೂ ಟ್ರಸ್ಟಿಗಳಾದ ಎಸ್. ಷಣ್ಮುಖಪ್ಪ ತಿಳಿಸಿದ್ದಾರೆ.
ಕಾರ್ಯಕ್ರಮದ ಸಾನಿದ್ಯವನ್ನು ಯೋಗವನ ಬೆಟ್ಟದ ಅಧ್ಯಕ್ಷರು. ಹಾಗೂ ಎಸ್.ಜೆ.ಎಂ. ಬೃಹನ್ಮಠ ಹಾಗೂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಬಸವಕುಮಾರ ಸ್ವಾಮಿಗಳು, ಮಾದಾರ ಚನ್ನಯ್ಯ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಗಳು ವಹಿಸಲಿದ್ದಾರೆ.
ಮಾಜಿ ಸಂಸದರು, ಎಸ್.ಎನ್. ಮೆಮೋರಿಯಲ್ ಟ್ರಸ್(ರಿ)ನ ಗೌರವ ಕಾರ್ಯದರ್ಶಿ ಹೆಚ್. ಹನುಮಂತಪ್ಪ, ವಿಶ್ರಾಂತ ಮುಖ್ಯ ವಾಸ್ತುಶಿಲ್ಪಿ, ಹಾಗೂ ಎಸ್.ಎನ್.ಟ್ರಸ್ಟ್. ಉಪಾಧ್ಯಕ್ಷರಾದ ಪ್ರೊ: ಎಸ್.ಎನ್. ಕಿರಣ್ ಶಂಕರ್ ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷರು ಹಾಗೂ. ಎಸ್.ಎನ್. ಮೆಮೋರಿಯಲ್ ಟ್ರಸ್ನ ಟ್ರಸ್ಟಿಗಳಾದ ಎಂ.ಕೆ. ತಾಜ್ ಪೀರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.