ದಾವಣಗೆರೆ : ನಗರದ ಶ್ರೀ ಕಾಳಿಕಾದೇವಿ ರಸ್ತೆಯಲ್ಲಿರುವ ಶ್ರೀ ಕಾಳಿಕಾದೇವಿ ವಿಶ್ವಕರ್ಮ ದೇವಸ್ಥಾನದಲ್ಲಿ ಡಿಸೆಂಬರ್ 17ರ ಮಂಗಳವಾರದಂದು ಶ್ರೀ ಕಾಳಿಕಾದೇವಿಯ ಕಡೇಕಾರ್ತಿಕೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಅಂದು ಬೆಳಿಗ್ಗೆ ಪ್ರಾತಃ ಕಾಲದಲ್ಲಿ ಶ್ರೀ ಅಮ್ಮನವರಿಗೆ ವೇದೋಕ್ತ ಪಂಚಾಮೃತ ಅಭಿಷೇಕ, ವಿಶ್ವಕರ್ಮ ಅಷ್ಟೋತ್ತರ ಪೂಜೆ, ಪುಷ್ಪಾಲಂಕಾರ, ವಿಶೇಷ ಪೂಜಾ ಅಲಂಕಾರ, ಮಹಾಮಂಗಳಾರತಿ ಕಾರ್ಯಕ್ರಮಗಳನ್ನು ಮತ್ತು ರಾತ್ರಿ 7-30 ಗಂಟೆಯ ನಂತರ ದೀಪಾರಾಧನೆ ಕಡೇ-ಕಾರ್ತಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸರ್ವಭಕ್ತಾದಿಗಳು, ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನ ಆಡಳಿತ ಸಮಿತಿ ಟ್ರಸ್ಟ್ ನಿಂದ ವಿನಂತಿಸಿಕೊಳ್ಳಲಾಗಿದೆ
				
															
                    
                    
                    
                    































