ಚಿತ್ರದುರ್ಗ: ಚಿತ್ರದುರ್ಗ ದಿಂದ ಅಮೃತಾಪುರ ರೈಲ್ವೇ ನಿಲ್ದಾಣದವರಗೆ ಮಾರ್ಚ್ 18 ರಂದು ವಿದ್ಯುತ್ ಮಾರ್ಗದ ಕಾಮಗಾರಿ ನಡೆಯುವ ಹಿನ್ನಲೆಯಲ್ಲಿ, ಚಿತ್ರದುರ್ಗ ವಿಭಾಗದ ವ್ಯಾಪ್ತಿಯಲ್ಲಿರುವ 66/11 ಕೆ.ವಿ ಅರಸನಘಟ್ಟ ಮತ್ತು ಚಿಕ್ಕಜಾಜೂರು ಮಾರ್ಗಗಳಲ್ಲಿ ವಿದ್ಯುತ್ ಮಾರ್ಗ ಮುಕ್ತತೆ ನೀಡಲಾಗಿದೆ. ಸದರಿ ಮಾರ್ಗದಲ್ಲಿ ಮಾಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಾಯವಾಗಲಿದೆ.
ನಗರದ ಆಂನೇಯ ದೇವಸ್ಥಾನ ಪ್ರದೇಶ, ಬಸವೇಶ್ವರ ದೇವಸ್ಥಾನ ಪ್ರದೇಶ, ಮೇಕೇನಹಟ್ಟಿ, ಕಾಟಯ್ಯನಕೆರೆ ಪ್ರದೇಶ, ನರಸಿಂಹಸ್ವಾಮಿ ದೇವಸ್ಥಾನ(ಗರಗ), ಅರಸನಘಟ್ಟ, ಗರಗ ಕಾವಲು, ಸಾದರಹಳ್ಳಿ, ಚಿಕ್ಕಂದವಾಡಿ, ಕರೀಮಟ್ಟಿ, ಚಿಕ್ಕನಕಟ್ಟೆ, ಚಿಕ್ಕಹೆಮ್ಮಿಗನೂರು, ಕೆ.ಎನ್.ಹಳ್ಳಿ, ತನಿಗೆಹಳ್ಳಿ, ಹೆರೇಕಂದವಾಡಿ, ಗುಂಜಿಗನೂರು, ರಂಗವ್ವನಹಳ್ಳಿ, ಬಿ.ದುರ್ಗ, ಐಯನಹಳ್ಳಿ, ಕಡೂರು, ಕೋಟೇಹಾಳು, ಎಸ್.ಹೆಚ್.ಹಳ್ಳಿ, ಚಿಕ್ಕಂದವಾಡಿ, ಚಿಕ್ಕಜಾಜೂರು, ಕವಲಹಟ್ಟಿ, ಹೋಸಹಳ್ಳಿ, ಸಾವೇರಮ್ಮ, ಗುಂಜಿಗನೂರು, ಗಾಲೀಮಾರಮ್ಮ ದೇವಸ್ಥಾನ ಪ್ರದೇಶ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ. ಗ್ರಾಹಕರು ಸಹಕರಿಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಕ ಇಂಜಿನಿಯರ್ ತಿಳಿಸಿದ್ದಾರೆ.































