ಬೆಂಗಳೂರು: ನಕಲಿ ದಾಖಲೆಗಳನ್ನು ನೀಡಿ ಪಡೆದುಕೊಂಡಿದ್ದ ಸುಮಾರು 12.47 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದ್ದು, ಈ ಮೂಲಕ ರಾಜ್ಯ ಸರ್ಕಾರವು ಅಕ್ರಮವಾಗಿ ಕಾರ್ಡ್‌ಹೊಂದಿರುವವರಿಗೆ ಬಿಸಿ ಮುಟ್ಟಿಸುವುದಕ್ಕೆ ಮುಂದಾಗಿದೆ.
ಅಕ್ರಮವಾಗಿ ಕಾರ್ಡ್ ಪಡೆದುಕೊಂಡಿರುವವರ ವಿವರವನ್ನು ಪತ್ತೆ ಹೆಚ್ಚುವುದಕ್ಕೆ ರಾಜ್ಯ ಸರ್ಕಾರವು ವಿವಿಧ ಮೂಲಗಳ ಮೊರೆ ಹೋಗಿದ್ದು, ಈ ಪೈಕಿ ಆದಾಯ ತೆರಿಗೆ ಇಲಾಖೆ, ಆರ್‌ಟಿಓ, ಸಬ್ ರಿಜಿಸ್ಟ್ರಾರ್ ಕಚೇರಿ, ಕಂದಾಯ ಇಲಾಖೆ ಕೂಡ ಆಗಿದೆ. ಇದಲ್ಲದೇ ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ. ಮೀರಿದವರ ಬಗ್ಗೆ ವಿವಿಧ ಇಲಾಖೆಗಳಿಂದ ಮಾಹಿತಿಯನ್ನು ಕಲೆ ಹಾಕುವುದಕ್ಕೆ ಮುಂದಾಗಿದೆ. ಅನರ್ಹರು ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಲ್ಲಿ ಅವರಿಗೆ ಎಪಿಎಲ್ ಕಾರ್ಡ್ ಅನ್ನು ನೀಡುವುದರ ಮೂಲಕ ಅಕ್ರಮವನ್ನು ಮಟ್ಟ ಹಾಕುವುದನ್ನೆ ಮುಂದಾಗಿದೆ ಇಲಾಖೆ.