ಚಿತ್ರದುರ್ಗ: ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಮುಂದುವರೆಯುತ್ತಿರುವ ಯೋಜನೆಗಳ ಅಡಿ 2024-25ನೇ ಸಾಲಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ, ಮತೀಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯ ನೀಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಗಸ್ಟ್ 17 ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದ್ದು, ಅಕ್ಟೋಬರ್ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಸಿಇಟಿ ಹಾಗೂ ನೀಟ್ ಮುಖಾಂತರ ಪದವಿ ಮತ್ತು ವೃತ್ತಿಪರ ಕೋರ್ಸುಗಳಾದ ಎಂ.ಬಿ.ಬಿಎಸ್, ಎಂ.ಡಿ, ಎಂ.ಎಸ್, ಬಿ.ಇ, ಬಿ.ಟೆಕ್, ಎಂ.ಇ, ಎಂಟೆಕ್, ಬಿ.ಡಿ.ಎಸ್, ಬಿ.ಆಯುಷ್, ಎಂ.ಆಯುಷ್, ಬಿ.ಆರ್ಕ್, ಎಂ.ಆರ್ಕ್, ಎಂಬಿಎ, ಎಂಸಿಎ, ಎಲ್.ಎಲ್.ಬಿ, ಬಿಎಸ್ಸಿ ಇನ್ ಹಾರ್ಟಿಕಲ್ಚರ್, ಇಂಜಿನಿಯರಿAಗ್, ಡೈರಿ ಟೆಕ್ನಾಲಜಿ, ಫಾರೆಸ್ಟಿç, ವೆರ್ನರಿ ಅಂಡ್ ಅನಿಮಲ್ ಟೆಕ್ನಾಲಜಿ, ಫಿರ್ಸ್, ಸೆರಿಕಲ್ಚರ್, ಹೊಮ್/ಕಮ್ಯುನಿಟಿ ಸೈನ್ಸ್, ಫುಡ್ ನರೇಷನ್ ಅಂಡ್ ಡೈಟೆಟಿಸ್, ಬಿ.ಫಾರ್ಮ, ಎಂ.ಫಾರ್ಮ ಗಳಲ್ಲಿ ಆಯ್ಕೆಯಾಗಿರುವಂತಹ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ, ಪಾರ್ಸಿ ಮತ್ತು ಆಂಗ್ಲೋ ಇಂಡಿಯನ್ ಸಮುದಾಯದ ವಿದ್ಯಾರ್ಥಿಗಳಿಗೆ ಅರಿವು ನವೀಕರಣ ಸಾಲ ಯೋಜನೆಯಡಿಯಲ್ಲಿ ಸೌಲಭ್ಯ ಒದಗಿಸಲಾಗುವುದು. ವಿದ್ಯಾರ್ಥಿಗಳು ಕೆ.ಎಂ.ಡಿ.ಸಿ ವೆಬ್ಸೈಟ್ kmdconline.karnataka.gov.in ನಲ್ಲಿ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಸಲ್ಲಿಸಿದ ಅರ್ಜಿಯೊಂದಿಗೆ ಸಂಬAಧಿಸಿದ ದಾಖಲೆಗಳನ್ನು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಿಗೆ ಸಲ್ಲಿಸಲು ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ 08194-226412, 8277944213 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.