ಇಂಡೋನೇಷ್ಯಾ: ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.9 ತೀವ್ರತೆ ದಾಖಲಾಗಿದೆ ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರದ ತಿಳಿಸಿದೆ.
ಬಂಡಾ ಸಮುದ್ರದಲ್ಲಿ ಭೂಕಂಪ ಸಂಭವಿಸಿದ್ದು, ಇದು ಸೌಮ್ಹಾಕಿ ನಗರವನ್ನು ಬಲವಾದ ಕಂಪನಗಳೊಂದಿಗೆ ಬೆಚ್ಚಿಬೀಳಿಸಿದೆ.
ಈ ಭೂಕಂಪದಿಂದ ಭಾರೀ ಅನಾಹುತ ಸಂಭವಿಸುವ ಸಾಧ್ಯತೆಗಳಿದ್ದು, ಇನ್ನೂ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಸುನಾಮಿ ಎಚ್ಚರಿಕೆಯೂ ನೀಡಲಾಗಿದೆ. ಇತ್ತ, ಪಶ್ಚಿಮ ಬಂಗಾಳದ ಅಲಿಪುರ್ದಾರ್ನಲ್ಲಿಯೂ 3.6 ತೀವ್ರತೆಯ ಭೂಕಂಪ ಸಂಭವಿಸಿದೆ.