ಕಬೀರಾನಂದ ಮಠ: ವಿಜಯದಶಮಿಯ ಸ್ಮರಣಾರ್ಥ ಶರನ್ನವರಾತ್ರಿ.!

 

ಚಿತ್ರದುರ್ಗ: ನಗರದ ಕಬೀರಾನಂದ ನಗರದಲ್ಲಿನ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಆಶ್ರಮದಲ್ಲಿ ನವರಾತ್ರಿಯ ಅಂಗವಾಗಿ ಕಳೆದ ಅ 3 ರಿಂದ 12 ವರೆಗೆ ಶ್ರೀ ಭಗವತಿ ಬಗಳಾಂಬಿಕಾದೇವಿ ದೇವಸ್ಥಾನದಲ್ಲಿ ವಿಜಯದಶಮಿಯ ಸ್ಮರಣಾರ್ಥ ಶರನ್ನವರಾತ್ರಿ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಕಾರ್ಯಕ್ರಮವು ಶ್ರೀ ಮಠದ ಪೀಠಾಧ್ಯಕ್ಷರಾದ ಶ್ರೀಶ್ರೀ ಶಿವಲಿಂಗಾನಂದ ಶ್ರೀಗಳ ದಿವ್ಯ ಸಾನೀಧ್ಯದಲ್ಲಿ ನಡೆದ ಶರನ್ನವರಾತ್ರಿ ಅಂಗವಾಗಿ ದೇವಿಯ ಚರಿತೆಯನ್ನು ಗೊಲ್ಲರಹಟ್ಟಿಯ ಸಿ ಈರಣ್ಣ ಮಲ್ಲಾಪುರ ರವರು ಪಠಿಸಿದರೆ ಸಾಹಿತಿಗಳು, ಶರಣ ಸಾಹಿತ್ಯ ಪರಿಷತ್‌ನ ಕಾರ್ಯದರ್ಶಿಗಳಾದ ಹುರಳಿ ಎಂ ಬಸವರಾಜು ಚರಿತ್ರೆಯನ್ನು ಪ್ರವಾಚನ ಮಾಡಿದರು. ಅ. 7 ರಂದು ಸುಬ್ರಾಯ ತಿಮ್ಮಣ್ಣ ಭಟ್ಟರ ತಂಡದೊAದಿಗೆ ಚಂಡಿಕಾ ಹೋಮವನ್ನು ನಡೆಸಲಾಯಿತು.

Advertisement

ಶರನ್ನವರಾತ್ರಿಯ ಕೊನೆಯ ದಿನವಾದ ನಿನ್ನೆ ಸಂಜೆ ಶ್ರೀ ಮಠದ ಕತೃಗಳಾದ ಶ್ರೀ ಸದ್ಗುರು ಕಬೀರಾನಂದ ಮಹಾಸ್ವಾಮಿಗಳವರ 118ನೇ ವರ್ಷದ ಜಯಂತ್ಯೋತ್ಸವನ್ನು ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನವ ದುರ್ಗೆಯವರ ಅಂಗವಾಗಿ ಆಶ್ರಮದ ಸುತ್ತಾ-ಮುತ್ತಲ್ಲಿನ 9 ಜನ ಬಾಲಕಿಯರನ್ನು ಕರೆಯಿಸಿ ಅವರಿಗೆ ಒಂದು ತಟ್ಟೆಯಲ್ಲಿ ಅಕ್ಕಿ, ಕಾಯಿ, ಬಳೆ, ಹರಿಷಿಣ, ಕುಂಕುಮ, ನೋಟು ಪುಸ್ತಕ, ಕಣ, ಕಾಣಿಕೆ, ಬಾಳೆ ಹಣ್ಣು ನೀಡಿ ಫಾದ ಪೂಜೆಯನ್ನು ಮಾಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ದೇವಿಗೆ ಸೀರೆಯನ್ನು ಉಡಿಸಿ,ಐದು ಹೆಡೆ ಸರ್ಪದ ಆಲಂಕಾರವನ್ನು ವಿವಿಧ ರೀತಿಯ ಹೂಗಳಿಂದ ಮಾಡಲಾಗಿತು.

ತದ ನಂತರ ಶ್ರೀ ಶಿವಲಿಂಗಾನAದ ಶ್ರೀಗಳು ತೆಲೆಗೆ ಪೇಟವನ್ನು ಧರಿಸಿ ಮೈಮೇಲೆ ಸುಂದರವಾದ ವಸ್ತçವನ್ನು ಧರಿಸಿ ಕೈಯಲ್ಲಿ ಕೋಲನ್ನು ಹಿಡಿದು ಆಶ್ರಮದ ಆವರಣದಲ್ಲಿ ನಿರ್ಮಾಣ ಮಾಡಲಾದ ಅಂಬುವನ್ನು ಕಡಿಯವುದÀರ ಮೂಲಕ ಹಾಗೂ ಬನ್ನಿ ಗಿಡವನ್ನು ಪೂಜೆ ಮಾಡುವುದರ ಮೂಲಕ ವಿಜಯದಶಮಿಯನ್ನು ಆಚರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಶ್ರೀ ಸದ್ಗುರು ಕಬೀರಾನಂದ ಮಹಾಸ್ವಾಮಿಗಳವರ 118ನೇ ವರ್ಷದ ಜಯಂತ್ಯೋತ್ಸವದ ಅಂಗವಾಗಿ ಅವರ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿ ಇರಿಸಿ ಆಶ್ರಮದ ಸುತ್ತಾ ಮೂರು ಸುತ್ತನ್ನು ಸಂಚಾರ ಮಾಡುವುದರ ಮೂಲಕ ಆಚರಣೆ ಮಾಡಲಾಯಿತು. ತದ ನಂತರ ಶಿವಲಿಂಗಾನAದ ಶ್ರೀಗಳು ಭಕ್ತರಿಗೆ ದರ್ಶನಾರ್ಶಿವಾದವನ್ನು ನೀಡಿದರು. ನಂತರ ಆಶ್ರಮದ ಒಳಗಡೆಯಲ್ಲಿ ಶ್ರೀಗಳು ಕೀರಿಟ  ಪೂಜೆಯನ್ನು ನೇರವೇರಿಸಿಕೊಟ್ಟರು.

ಈ ಸಂದರ್ಭದಲ್ಲಿ ಆಶ್ರಮದ ಕಾರ್ಯದರ್ಶಿಗಳಾದ ಪ್ರಶಾಂತ್, ಭಕ್ತಾಧಿಗಳಾದ ಸತೀಶ್, ತಿಪ್ಪೇಸ್ವಾಮಿ, ಗಣಪತಿ ಶಾಸ್ತಿç, ಮಂಜುನಾಥ್ ಗುಪ್ತ, ನಿರಂಜನ ಮೂರ್ತಿ, ಓಂಕಾರ್, ಗೌರಣ್ಣ, ಬಸವರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement