ಚಿತ್ರದುರ್ಗ: ಚಿತ್ರದುರ್ಗ ನಗರದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಅದ್ದೂರಿಯಾಗಿ ನಡೆಯಿತು. ಲಕ್ಷಾಂತರ ಭಕ್ತರು ಆಗಮಿಸಿದ್ದರು ಎಲ್ಲರೂ ಕುಣಿದು ಕುಪ್ಪಳಿಸಿದರು. ಆದರೆ ಜೋಗಿಮಟ್ಟಿ ಗೆಳೆಯರ ಬಳಗ ನಗರದಲ್ಲಿನ ಚಳ್ಳಕೆರೆ ಮುಖ್ಯರಸ್ತೆಯಿಂದ ಮದಕರಿ ನಾಯಕ ವೃತ್ತದ ತನಕ ಶ್ರೀ ಬಸವ ನಾಗೀದೇವ ಶರಣರ ನೇತೃತ್ವದಲ್ಲಿ ಸ್ವಚ್ಚತಾ ಕಾರ್ಯ ಮಾಡಿದರು.
ಚಿತ್ರದುರ್ಗದ ಜೋಗಿಮಟ್ಟಿ ಗೆಳೆಯರ ಬಳಗದ ಯುವಕರೊಂದಿಗೆ ಗೌತಮ ಸೇನೆ ಮತ್ತು ಅಂಬೇಡ್ಕರ್ ಸೇನೆ ಸಂಘಟನೆಗಳು ಹಿಂದೂ ಮಹಾಗಣಪತಿ ಶೋಭಾಯಾತ್ರೆ ಅದ್ದೂರಿಯ ನಂತರ ರಸ್ತೆಯ ತುಂಬಾ ಬಿದ್ದಿದ್ದ ತ್ಯಾಜ್ಯ ವನ್ನು ಸ್ವಚ್ಛ ಮಾಡಿದರು.
ಇದಕ್ಕೆ ಛಲವಾದಿ ಗುರುಪೀಠದ ಶ್ರೀ ಬಸವ ನಾಗೀದೇವ ಶರಣರು ಸ್ವತಃ ಮದಕರಿ ವೃತ್ತವನ್ನು ಸ್ವಚ್ಚಗೊಳಿಸುವ ಮೂಲಕ ಮಾದರಿಯಾದರು, ಈ ವೇಳೆ ಮಾತನಾಡಿದ ಅವರು ಸಮಾಜದಲ್ಲಿ ಯುವಶಕ್ತಿಯ ಪಾತ್ರ ಬಹಳ ಪ್ರಮುಖವಾದುದ್ದು , ಆದರೆ ಯುವಸಮೂಹ ಡಿ.ಜೆ ಮುಂದೆ ಕುಣಿದು ಕುಪ್ಪಳಿಸಿದರೆ ನಮ್ಮ ಜೋಗಿಮಟ್ಟಿ ಗೆಳೆಯರ ಬಳಗದ ತಂಡ ಸಾರ್ವಜನಿಕರಿಂದ ರಸ್ತೆ ತುಂಬಾ ತುಂಬಿದ್ದ ತ್ಯಾಜ್ಯವನ್ನ ಸ್ವಚ್ಚ ಮಾಡುವ ಮೂಲಕ ಅತ್ಯುತ್ತಮ ಕೆಲಸ ಮಾಡಿ ಸಂಘಟನೆಯಲ್ಲಿ ಮಾದರಿಯಾಗಿದೆ. ಸ್ವಚ್ಚ ಮಾಡುವ ಕಾರ್ಯದೊಂದಿಗೆ ಮದ್ಯಾಹ್ನ ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಕುಡಿಯುವ ನೀರನ್ನು ಪೂರೈಕೆ ಮಾಡಿದ್ದು ಖುಷಿ ತಂದಿದೆ ಎಲ್ಲಾರು ಸೇರಿ “ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಸಹಕಾರ ನೀಡಿದರು.
ಸ್ವಚ್ಚತಾ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಎಸ್.ರಾಘವೇಂದ್ರ, ಪ್ರಧಾನಕಾರ್ಯದರ್ಶಿಗಳಾದ ಎಲ್.ಮಂಜುನಾಥ್ ಖಜಾಂಚಿಗಳಾದ ರವಿಕುಮಾರ್ ಬಿ. ಸಂಘಟನಾ ಕಾರ್ಯದರ್ಶಿಯಾದ ಚಂದ್ರಶೇಖರ್ ಪಾಟೀಲ್, ಪರಮೇಶ್, ಹೋಟೆಲ್ ತಿಮ್ಮಣ್ಣ, ಸುರೇಶ್ ಮಠ, ಮಂಜು, ಗೌತಮ ಸೇನೆಯ ಅಧ್ಯಕ್ಷರಾದ ಮಂಜುನಾಥ್ ಮತ್ತು ಕಾರ್ಯದರ್ಶಿಗಳಾದ ಸಿ.ಎ.ತಿಪ್ಪೇಸ್ವಾಮಿ, ಮತ್ತು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆಯ ರುದ್ರಮುನಿರವರು ಭಾಗವಹಿಸಿದ್ದರು.