ಭಾರತದ ಭವಿಷ್ಯಕ್ಕೆ ಸಮಾಜಶಾಸ್ತ್ರಜ್ಞರ ಅವಶ್ಯಕತೆ: ಕೆ.ಎಸ್.ನವೀನ್

 

 

ಚಿತ್ರದುರ್ಗ : ಭಾರತದ ಭವಿಷ್ಯಕ್ಕೆ ಸಮಾಜಶಾಸ್ತ್ರಜ್ಞರ ಅವಶ್ಯಕತೆಯಿದೆ ಎಂದು ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.

Advertisement

ಕರ್ನಾಟಕ ಶೋಷಿಯಾಲಜಿ ಅಸೋಸಿಯೇಷನ್, ಸರ್ಕಾರಿ ಕಲಾ ಕಾಲೇಜು(ಅಟಾನಮಸ್) ಚಿತ್ರದುರ್ಗ, ಚಳ್ಳಕೆರೆ ಹೆಚ್.ಪಿ.ಪಿ.ಸಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ ವಿಶ್ವವಿದ್ಯಾನಿಲಯ ಸಮಾಜಶಾಸ್ತ್ರ ಶಿಕ್ಷಕರ ಅಸೋಸಿಯೇಷನ್, ಕಾಲೇಜು ಪ್ರಾಧ್ಯಾಪಕರ ಅಸೋಸಿಯೇಷನ್ ಸಹಯೋಗದೊಂದಿಗೆ ಸರ್ಕಾರಿ ಕಲಾ ಕಾಲೇಜು (ಅಟಾನಮಸ್) ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಹಾಲ್ನಲ್ಲಿ ಶುಕ್ರವಾರ ನಡೆದ ಹದಿನಾರನೆ ರಾಷ್ಟ್ರೀಯ ಸಮಾಜಶಾಸ್ತ್ರ ಸಮ್ಮೇಳನ ಉದ್ಗಾಟಿಸಿ ಮಾತನಾಡಿದರು.

ಸಮಾಜಶಾಸ್ತ್ರಜ್ಞರು ಗಂಭೀರವಾಗಿ ಚಿಂತಿಸಿದರೆ ದೇಶದ ಭವಿಷ್ಯವನ್ನು ಪರಿವರ್ತಿಸಬಹುದು. ಇಂಜಿನಿಯರ್, ಡಾಕ್ಟರ್ಗಳು ಕೇವಲ ನಾಲ್ಕು ಗೋಡೆಯಲ್ಲಿ ಲ್ಯಾಬ್ಗಳಲ್ಲಿ ಕೆಲಸ ಮಾಡುತ್ತಾರೆಯೇ ವಿನಹ ದೇಶದ ಭವಿಷ್ಯ ಬದಲಾಯಿಸುವುದಿಲ್ಲ. ಅದೇ ಸಮಾಜಶಾಸ್ತ್ರಜ್ಞರಿಂದ ದೇಶದಲ್ಲಿ ಏನು ಬೇಕಾದರೂ ಬದಲಾವಣೆ ತರಲು ಸಾಧ್ಯ. ವಿದ್ಯಾರ್ಥಿಗಳಿಗೆ ಸಮಾಜಶಾಸ್ತ್ರದ ಬಗ್ಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿ ಉಪನ್ಯಾಸಕರು, ಅಧ್ಯಾಪಕರುಗಳ ಮೇಲಿದೆ ಎಂದು ತಿಳಿಸಿದರು.

ದಿನ ಬೆಳಗಾದರೆ ಮಾಧ್ಯಮಗಳಲ್ಲಿ ಭ್ರಷ್ಟಾಚಾರ, ಅಪರಾಧಗಳನ್ನೇ ನೋಡುತ್ತಿದ್ದೇವೆ. ಇಂದಿನ ಪೀಳಿಗೆಯ ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರ, ಗುರು-ಹಿರಿಯರನ್ನು ಗೌರವಿಸುವುದು ಹಾಗೂ ಸಮಾಜದಲ್ಲಿ ಯಾವ ರೀತಿ ಬದುಕಬೇಕೆನ್ನುವ ಜ್ಞಾನ ಬೇಕಾಗಿರುವುದರಿಂದ ಸಮಾಜಶಾಸ್ತ್ರಕ್ಕೆ ತನ್ನದೆ ಆದ ಮಹತ್ವವಿದೆ ಎಂದರು.

ದಾವಣಗೆರೆ ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ.ಬಿ.ಡಿ.ಕುಂಬಾರ್ , ಸಾವಿತ್ರಿಬಾಯಿಪುಲೆ ಪುಣೆ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಶೃತಿ ತಂಬೆ, ಮಾತನಾಡಿದರು.

ಸರ್ಕಾರಿ ಕಲಾ ಕಾಲೇಜು ಅಟಾನಮಸ್ ಪ್ರಾಚಾರ್ಯರಾದ ಬಿ.ಟಿ.ತಿಪ್ಪೇರುದ್ರಸ್ವಾಮಿ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಚಳ್ಳಕೆರೆ ಹೆಚ್.ಪಿ.ಪಿ.ಸಿ.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಮಂಜುನಾಥ ಬಿ.ಎಸ್. ಕರ್ನಾಟಕ ಸೋಶಿಯಾಲಜಿ ಅಸೋಸಿಯೇಷನ್ ಅಧ್ಯಕ್ಷೆ ಪ್ರೊ.ಜಯಶ್ರಿ ಎಸ್. ಕಾರ್ಯದರ್ಶಿ ಡಾ.ಆದಿನಾರಾಯಣಪ್ಪ, ಸಂಘಟನಾ ಕಾರ್ಯದರ್ಶಿ ಡಾ.ಎಸ್.ಆರ್.ಲೇಪಾಕ್ಷ, ಸಹ ಸಂಘಟನಾ ಕಾರ್ಯದರ್ಶಿ ಡಾ.ಶ್ಯಾಮರಾಜ್ ಟಿ.

ಐ.ಕ್ಯೂ.ಎ.ಸಿ. ಕೋ-ಆರ್ಡಿನೇಟರ್ ಪ್ರೊ.ತಾರಿಣಿ ಶುಭದಾಯಿನಿ ವೇದಿಕೆಯಲ್ಲಿದ್ದರು.

ರಾಜ್ಯ ಹಾಗೂ ಹೊರ ರಾಜ್ಯಗಳ ವಿವಿಧ ಕಾಲೇಜುಗಳ ಅಧ್ಯಾಪಕರುಗಳು, ವಿಶ್ವವಿದ್ಯಾನಿಲಯ ಹಾಗೂ ಪ್ರಥಮ ದರ್ಜೆ ಕಾಲೇಜಿನ ಅಧ್ಯಾಪಕರುಗಳು ಹಾಗೂ ಸಂಶೋಧನಾ, ಸ್ನಾತಕೋತ್ತರ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement