ಭೂಮಿ ದಿನದ ಅಂಗವಾಗಿ ಬೀಜದ ಉಂಡೆ ತಯಾರಿಕಾ ಕಾರ್ಯಾಗಾರ

 

ಚಿತ್ರದುರ್ಗ: ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಜೀವಿಗಳು ವಾಸಿಸುವ ಏಕೈಕ ಗ್ರಹ ನಮ್ಮ ಭೂಮಿ. ಭೂಮಿಯನ್ನು ರಕ್ಷಿಸದಿದ್ದರೆ ಜೀವಿಗಳ ಉಳಿವು ಅಸಾಧ್ಯ. ಈ ಹಿನ್ನೆಲೆಯಲ್ಲಿ ವಿಶ್ವ ಭೂ ದಿನದ ಅಂಗವಾಗಿ ನಮ್ಮ ಸಂಸ್ಥೆ ವತಿಯಿಂದ ಬೀಜದ ಉಂಡೆ ತಯಾರಿಕಾ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಖಜಾಂಚಿ ಶ್ರೀಮತಿ ಸುಮಾ ಚಿದಾನಂದ್ ತಿಳಿಸಿದರು.

ಚಿತ್ರದುರ್ಗ ತಾಲ್ಲೋಕಿನ ಸಿದ್ದಾಪುರ ಗ್ರಾಮದಲ್ಲಿ ಪ್ರಥಮ್ ಸಂಸ್ಥೆಯ ವತಿಯಿಂದ ಭೂ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಬೀಜದ ಉಂಡೆ ತಯಾರಿಕಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

Advertisement

ಬೇಸಿಗೆ ಬಂದರೆ ವಿಧವಿಧವಾದ ರುಚಿಕರ ಹಣ್ಣುಗಳನ್ನು ತಿಂದು ಬೀಜಗಳನ್ನು ಬಿಸಾಕುತ್ತೇವೆ. ಈ ಬೀಜಗಳನ್ನು ಬಿಸಾಕುವ ಬದಲು ಬೀಜದ ಉಂಡೆಗಳನ್ನು  ತಯಾರಿಸಿ ಮಳೆಗಾಲ ಪ್ರಾರಂಭ ಆಗುವ ಮುನ್ನ ಅರಣ್ಯಗಳಲ್ಲಿ ಪಸರಿಸಿದರೆ ಕಾಡುಗಳನ್ನು ಬೆಳೆಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಹಣ್ಣುಗಳನ್ನು ತಿಂದು ಬೀಜಗಳನ್ನು ಬಿಸಾಕುವ ಬದಲಾಗಿ ಮನೆಯಲ್ಲಿ ಸುಲಭವಾಗಿ ಬೀಜದ ಉಂಡೆಗಳನ್ನು ತಯಾರಿಸುವುದರಿಂದ ಪ್ರಯಾಣ ಮಾಡುವಾಗ ಅಥವಾ ಸಮೀಪದ ಅರಣ್ಯ ಪ್ರದೇಶಕ್ಕೆ ತೆರಳಿ ಬೀಜದ ಉಂಡೆಗಳನ್ನು ಪಸರಿಸಲು ಸಾಧ್ಯವಾಗುತ್ತದೆ ಇದರಿಂದ ಅರಣ್ಯಗಳನ್ನು ಸಂರಕ್ಷಿಸಲು ಸಾಧ್ಯವಾಗುತ್ತದೆ ಇಂತಹ ಉತ್ತಮ ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸೋಣ ಎಂದು ಶಿಕ್ಷಕಿಯಾದ ಶ್ರೀಮತಿ ಚಂದ್ರಕಲಾ ಅವರು ತಿಳಿಸಿದರು.

ಬೀಜದ ಉಂಡೆಗಳನ್ನು ತಯಾರಿಸಲು ಅತ್ಯಂತ ಸುಲಭ ಮನೇಲಿ ಸಿಗುವ ಪರಂಗಿ ಹಲಸು ಮಾವು ಇವುಗಳನ್ನು ಕೆಮ್ಮಣ್ಣು ಗೊಬ್ಬರವನ್ನು ಬಳಸಿ ಉಂಡೆಗಳನ್ನು ಕಟ್ಟಬಹುದು. ಮಕ್ಕಳಿಗೆ ಈ ಚಿಕ್ಕ ವಯಸ್ಸಿನಲ್ಲೇ ಪರಿಸರ ಕಾಳಜಿ ಮೂಡಿಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರು ಎಷ್ಟು ಸಾಧ್ಯವೋ ಅಷ್ಟು ಬೀಜದ ಉಂಡೆಗಳನ್ನು ತಯಾರಿಸುವುದರಿಂದ ಪರಿಸರ ಉಳಿವಿಗೆ ಸಹಾಯಕವಾಗುತ್ತದೆ ಈ ಕಾರ್ಯಕ್ರಮದಲ್ಲಿ ಸುಮಾರು1000 ಬೀಜದ ಉಂಡೆಗಳನ್ನು ತಯಾರಿಸಲಾಗಿದೆ ಭಾನುವಾರ ಬೀಜಪ್ರಸರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಂದು ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಚೈತ್ರ ಅವರು ತಿಳಿಸಿದರು.

ಕಾರ್ಯಾಗಾರದಲ್ಲಿ ಡಾ ಮಹೇಶ್ ವಕೀಲರಾದ ಸುಧೀರ್ ಹಾಗೂ ಸಿದ್ದಾಪುರ ಗ್ರಾಮಸ್ಥರು ಹಾಜರಿದ್ದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement