ಚಿತ್ರದುರ್ಗ : ರಾಜಸ್ಥಾನ, ಮಧ್ಯಪ್ರದೇಶ, ಛತ್ತಿಸ್ಗಡದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ. ಗೆಲುವು ಸಾಧಿಸಿರುವುದು ಮುಂದಿನ ಪಾರ್ಲಿಮೆಂಟ್ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ನರೇಂದ್ರಮೋದಿ ನೇತೃತ್ವದಲ್ಲಿ ಬಿಜೆಪಿ.ಗೆ ಜಯ ಸಿಕ್ಕಿರುವುದಕ್ಕೆ ಗಾಂಧಿ ವೃತ್ತದಲ್ಲಿ ಸೋಮವಾರ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜಿ.ಹೆಚ್.ತಿಪ್ಪಾರೆಡ್ಡಿ ನಾಲ್ಕು ಬಾರಿ ಮಧ್ಯಪ್ರದೇಶದ ಸಿ.ಎಂ.ಆಗಿದ್ದ ಶಿವರಾಜ್ಸಿಂಗ್ ಚೌಹ್ಹಾಣ್ ಬಹುಮತದಿಂದ ಗೆದ್ದಿದ್ದಾರೆ. ಮುಂದುವರೆದ ರಾಷ್ಟ್ರಗಳು ನಮ್ಮ ದೇಶದ ಪ್ರಧಾನಿಯ ಪಾರದರ್ಶಕ ಆಡಳಿತವನ್ನು ಮೆಚ್ಚಿಕೊಂಡು ನಮ್ಮ ದೇಶದಲ್ಲಿ ಬಂಡವಾಳ ಹಾಕಲು ಮುಂದೆ ಬರುತ್ತಿವೆ. ಕಾಂಗ್ರೆಸ್ ಗ್ಯಾರೆಂಟಿಗಳನ್ನು ತಿರಸ್ಕರಿಸಿ ಮೂರು ರಾಜ್ಯಗಳಲ್ಲಿ ಮತದಾರರು ಬಿಜೆಪಿ.ಯನ್ನು ಬೆಂಬಲಿಸಿದ್ದಾರೆ. ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಿಜೆಪಿ. ಎನ್.ಡಿ.ಎ. ಸೇರಿಕೊಂಡು ನಾಲ್ಕು ನೂರು ಸೀಟುಗಳನ್ನು ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು.
ಯಾವಾಗಲೂ ಬಿಜೆಪಿ.ಇಷ್ಟೊಂದು ಬಹುಮತಗಳಿಂದ ಗೆದ್ದಿರಲಿಲ್ಲ. ಇದು ಕೇವಲ ಬಿಜೆಪಿ.ಗಷ್ಟೆ ಅಲ್ಲ. ಇಡಿ ದೇಶಕ್ಕೆ ವಿಜಯೋತ್ಸವ ಎಂದು ಹರ್ಷ ವ್ಯಕ್ತಪಡಿಸಿದರು.
ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ, ನಗರಾಧ್ಯಕ್ಷ ನವೀನ್ ಚಾಲುಕ್ಯ, ಮಾಜಿ ಜಿಲ್ಲಾಧ್ಯಕ್ಷ ಟಿ.ಜಿ.ನರೇಂದ್ರನಾಥ್, ಎಸ್.ಆರ್.ಗಿರೀಶ್, ಸಂಪತ್ಕುಮಾರ್, ಕೆ.ಜಯಣ್ಣ, ಶಿವಣ್ಣಾಚಾರ್, ಭಾರ್ಗವಿ ದ್ರಾವಿಡ್, ದಗ್ಗೆಶಿವಪ್ರಕಾಶ್, ನಂದಿ ನಾಗರಾಜ್, ಚಂದ್ರು, ತಿಪ್ಪೇಸ್ವಾಮಿ, ನಾಗರಾಜ್ಬೇದ್ರೆ, ದ್ರಾವಿಡ್ ರೇಖಾ, ಬಸಮ್ಮ, ತಿಮ್ಮಣ್ಣ, ಶಾಂತಮ್ಮ, ಶಂಭು, ಕೃಷ್ಣ, ಯಶವಂತ್, ಪ್ರಶಾಂತ್, ಚಂದ್ರಿಕಾ ಲೋಕನಾಥ್, ಕವನ, ಶ್ಯಾಮಲಾ ಶಿವಪ್ರಕಾಶ್, ವೀಣ, ಅರುಣ, ಪ್ರಸನ್ನ, ಕಮಲೇಶ್, ಅನುಸೂಯಮ್ಮ, ಸೇರಿದಂತೆ ಅನೇಕ ಪದಾಧಿಕಾರಿಗಳು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.