ದಾವಣಗೆರೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಹರಿಹರ ತಾಲ್ಲೂಕು ಹೊಸಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ನಂದಿಗಾವಿ ಗ್ರಾಮದಲ್ಲಿ 2017-18ರಲ್ಲಿ ಮುಂಗಾರು ಹಂಗಾಮಿನಡಿಯಲ್ಲಿ ಮೆಕ್ಕೇಜೋಳ ಬೆಳೆದು ಸೈನಿಕ ಹುಳದ ಬಾಧೆಯಿಂದ ರೈತರು ಅನುಭವಿಸಿದ ನಷ್ಟಕ್ಕೆ ಅನುಗುಣವಾಗಿ ವಿಮಾ ಕಂಪನಿ ಪರಿಹಾರ ನೀಡಲು ಸೂಚಿಸಲಾಗಿದೆ.
ರೈತರು ಬೆಳೆದ ಮೆಕ್ಕೆ ಜೋಳವು ಸೈನಿಕ ಹುಳದ ಬಾಧೆಯಿಂದ ನಷ್ಟಗೊಂಡಿದ್ದು, ಕೃಷಿ ಅಧಿಕಾರಿಗಳ ಸಲಹೆಯಂತೆ ಎಲ್ಲಾ ಅಗತ್ಯ ಕ್ರಮ ಕೈಗೊಂಡರೂ ಸಹಾ ಕೀಟರೋಗ ದಿನೇ ದಿನೇ ವ್ಯಾಪಿಸಿ ಬಹುತೇಕ ಬೆಳೆ ಹಾನಿಗೊಳಗಾಗಿತ್ತು. ರೈತರು ವಿಮಾ ಕಂಪನಿಯ ಪ್ರತಿನಿಧಿಗಳಿಗೆ ತಮ್ಮ ಅಹವಾಲನ್ನು ಸಲ್ಲಿಸಿದರೂ ಸಹ ನಿರ್ಲಕ್ಷಿಸಿದ್ದು, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಮಹಾಂತೇಶ ಶಿಗ್ಲಿ ಹಾಗೂ ಸದಸ್ಯರಾದ ಸಿ.ಎಸ್ ತ್ಯಾಗರಾಜನ್ ಮತ್ತು ಗೀತಾ ಅವರನ್ನೊಳಗೊಂಡ ಆಯೋಗವು ವಿಮಾ ಕಂಪನಿಯವರು ಬೆಳೆ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಲು ಆದೇಶಿಸಿದ್ದಾರೆ.