ಮೊಳಕಾಲ್ಮೂರು : ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ಮೀನುಗಾರಿಕೆ ಇಲಾಖೆ: ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

 

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ 05 ಅಂಗನವಾಡಿ ಕಾರ್ಯಕರ್ತೆ ಮತ್ತು 14 ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಗೌರವಧನದ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಗಸ್ಟ್ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಅಂಗನವಾಡಿ ಕಾರ್ಯಕರ್ತೆ ಹುದ್ದೆ ಕೇಂದ್ರಗಳ ವಿವರ: ಮೊಳಕಾಲ್ಮೂರು ತಾಲ್ಲೂಕಿನ ನರ‍್ಲಹಳ್ಳಿ ಗ್ರಾ. ಪಂ.ನ ಅವುಲು ಪಾಪಯ್ಯನಹಟ್ಟಿ, ರಾಯಪುರ ಗ್ರಾ.ಪಂ.ನ ಮಠದಜೋಗಿಹಳ್ಳಿ, ನಾಗಸಮುದ್ರ ಗ್ರಾ. ಪಂ.ನ ನಾಗಸಮುದ್ರ-ಡಿ ಹಾಗೂ ನಾಗಸಮುದ್ರ-ಎಚ್ ಅಂಗನವಾಡಿ ಕೇಂದ್ರಗಳು ಪರಿಶಿಷ್ಟ ಪಂಗಡಕ್ಕೆ ಹಾಗೂ ಮೊಳಕಾಲ್ಮೂರು ಪಟ್ಟಣ ಪಂಚಾಯಿತಿಯ ವಾರ್ಡ-11ರ ಸಂತೇ ಮೈದಾನ ಇತರೆ ವರ್ಗಕ್ಕೆ ಮೀಸಲಿವೆ.

Advertisement

ಅಂಗನವಾಡಿ ಸಹಾಯಕಿಯರ ಕೇಂದ್ರಗಳ ಮೀಸಲಾತಿ ವಿವರ: ಹಾನಗಲ್ ಗ್ರಾ.ಪಂ.ನ ಹಾನಗಲ್-ಎ ಹಾಗೂ ಹಳೆಕೆರೆ, ರಾಪಾಪುರ ಗ್ರಾ.ಪಂ.ನ ಮಠದಜೋಗಿಹಳ್ಳಿ, ಬಿ.ಜಿ.ಕೆರೆ ಗ್ರಾ.ಪಂ.ನ ಸೂರಮ್ಮನಹಳ್ಳಿ-ಬಿ ಮತ್ತು ಮುತ್ತಿಗಾರಹಳ್ಳಿ ಮ್ಯಾಸರಹಟ್ಟಿ, ನರ‍್ಲಹಳ್ಳಿ ಗ್ರಾ.ಪಂ.ನ ಮುದ್ದಯ್ಯನಹಟ್ಟಿ, ಅಶೋಕ ಸಿದ್ದಾಪುರ ಗ್ರಾ.ಪಂ.ನ ಮಾಚೇನಹಳ್ಳಿ ಎಸ್.ಟಿ ಕಾಲೋನಿ, ತಮ್ಮೇನಹಳ್ಳಿ ಗ್ರಾ.ಪಂ.ನ ಬೊಮ್ಮದೇವರಹಳ್ಳಿ-ಬಿ ಅಂಗನವಾಡಿ ಕೇಂದ್ರಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಿವೆ. ಉಳಿದಂತೆ ಜೆ.ಬಿ.ಹಳ್ಳಿ ಗ್ರಾ.ಪಂ.ನ ಹೊಸದಡಗೂರು-ಎ, ಅಶೋಕ ಸಿದ್ದಾಪುರ ಗ್ರಾ.ಪಂ.ನ ಗೌರಸಮುದ್ರ-ಬಿ ಕೇಂದ್ರಗಳು ಪರಿಶಿಷ್ಟ ಜಾತಿಗೆ ಹಾಗೂ ತಮ್ಮೇನಹಳ್ಳಿ ಗ್ರಾ.ಪಂ.ನ ಮುರುಡಿ, ದೇವಸಮುದ್ರ ಗ್ರಾ.ಪಂ.ನ ವೆಂಕಟಾಪುರ-ಎ, ಕೊಂಡ್ಲಹಳ್ಳಿ ಗ್ರಾ.ಪಂ.ನ ಕೊಂಡ್ಲಹಳ್ಳಿ-ಡಿ, ಚಕ್ಕೇರಹಳ್ಳಿ ಗ್ರಾ.ಪಂ.ನ ಅಮುಕುಂದಿ-ಎ ಕೇಂದ್ರಗಳು ಇತರೆ ವರ್ಗಕ್ಕೆ ಮೀಸಲಿವೆ.

ಹೆಚ್ಚಿನ ಮಾಹಿತಿಗಾಗಿ ಮೊಳಕಾಲ್ಮೂರು ತಾಲ್ಲೂಕಿನ ಸಾಮರ್ಥ್ಯ ಸೌಧ ಹಿಂಭಾಗ, ಸ್ತಿçà ಶಕ್ತಿ ಭವನಕಟ್ಟಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ದೂರವಾಣಿ ಸಂಖ್ಯೆ 08198-229565 ಗೆ ಸಂಪರ್ಕಿಸಬಹುದು ಎಂದು ಮೊಳಕಾಲ್ಮೂರು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement