ಹೊಸಪೇಟೆ: ಹೂವಿನಹಡಗಲಿ ತೋಟಗಾರಿಕೆ ಇಲಾಖೆಯಿಂದ 2023-24ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ಸಹಾಯಧನ ಪಡೆಯಲು ರೈತರು ಸ್ವಂತ ಜಮೀನು, ನೀರಾವರಿವುಳ್ಳವರಾಗಿರಬೇಕು. ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವ ರೈತರಿಗೆ ಹನಿ ನೀರಾವರಿ ಉಪಕರಣಗಳನ್ನು ಅಳವಡಿಸಿಕೊಳ್ಳಲು ಅವಕಾಶವಿರುತ್ತದೆ. ಹನಿ ನೀರಾವರಿ ನೀರಾವರಿ ಕಾರ್ಯಕ್ರಮದಡಿ ಸರ್ಕಾರದ ಮಾರ್ಗಸೂಚಿಯನ್ವಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ಶೇ.90ರಷ್ಟು ಸಹಾಯಧನ ಇತರೆ ವರ್ಗದ ರೈತರಿಗೆ ಶೇ.75ರಷ್ಟು ಸಹಾಯಧನವನ್ನು ಮೊದಲ 2.00 ಹೆಕ್ಟರ್ ಗೆ ನಂತರದ ಪ್ರದೇಶಕ್ಕೆ ಶೇ.45 ರಷ್ಟು ಸಹಾಯಧನ ಪಾವತಿಸಲಾಗುವುದು.
ಪರಿಶಿಷ್ಟ ಜಾತಿ, ಪಂಗಡ ರೈತರು ಆರ್.ಡಿ ಸಂಖ್ಯೆ ಇರುವಂತಹ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಅರ್ಹ ರೈತ ಫಲಾನುಭವಿಗಳು ಡಿಸೆಂಬರ್ 22 ರೊಳಗೆ ಅರ್ಜಿ ಸಲ್ಲಿಸಿ ಇಲಾಖೆಯಿಂದ ಹನಿ ನೀರಾವರಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಹಡಗಲಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ಟಿ.ಸುಧಾಕರ ಮೊ.ನಂ: 8105166176, ತೋಟಗಾರಿಕೆ ಸಹಾಯಕಿ ಶಿವಕಲ್ಲವ್ವ ಕೆ ಕುರಿ ಮೊ.ನಂ: 7760553810,
ಇಟ್ಟಗಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ಹರೀಶ ಎಂ.ಆರ್ ಮೊ.ನಂ: 9743674669 ಹಾಗೂ ತೋಟಗಾರಿಕೆ ಸಹಾಯಕ ರೇಣುಕ ಪ್ರಸಾದ್ ಕವಸರ ಮೊ.ನಂ: 9535910697 ಹಾಗೂ ಹಿರೇಹಡಗಲಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ಬಸಮ್ಮ ಸಂಡೂರು ಮೊ.ನಂ: 8497812276, ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಹೂವಿನಹಡಗಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.