ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ವಿವಿಧ ಸಾಲ ಸೌಲಭ್ಯ ಪಡೆಯಲು ; ಅರ್ಜಿ ಆಹ್ವಾನ

 

ಹೊಸಪೇಟೆ : ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ 2023-24ನೇ ಸಾಲಿನ ವಿವಿಧ ಯೋಜನೆಗಳ ಅಡಿಯಲ್ಲಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ ಎಂದು ವಿಜಯನಗರ ಜಿಲ್ಲಾ ವ್ಯವಸ್ಥಾಪಕ ಕೆ. ಭೀಮಪ್ಪ ಅವರು ತಿಳಿಸಿದ್ದಾರೆ.

ವೀರಶೈವ ಲಿಂಗಾಯತ ಜಾತಿ, ಉಪಜಾತಿಗೆ ಸೇರಿದ ಪ್ರವರ್ಗ-3ಬಿಗೆ ಸೇರಿದ ಅರ್ಜಿದಾರರು ವಿವಿಧ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬಹುದು.

Advertisement

ಬಸವಬೆಳಗು ಯೋಜನೆ, ವಿದೇಶ ವಿದ್ಯಾವಿಕಾಸ ಯೋಜನೆ, ಜೀವಜಲ ಯೋಜನೆ, ಕಾಯಕ ಕಿರಣ ಯೋಜನೆ, ಭೋಜನಾಲಯ ಕೇಂದ್ರ(ಹೋಟೆಲ್ ಉದ್ಯಮ), ವಿಭೂತಿ ನಿರ್ಮಾಣ ಘಟಕ, ಸ್ವಾವಲಂಬಿ ಸಾರಥಿ ಯೋಜನೆ ಹಾಗೂ ಸ್ವಯಂ ಉದ್ಯೋಗ ಸಾಲ ಯೋಜನೆ ಅಡಿಯಲ್ಲಿ ಸೌಲಭ್ಯ ಪಡೆಯಲು ಅರ್ಜಿದಾರರು ಸೇವಾಸಿಂಧು ಪೋರ್ಟಲ್ https://kvldcl.karnataka.gov.in ಮೂಲಕ ಅ.30ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಹೊಸಪೇಟೆ ತಾಲ್ಲೂಕು ಕಚೇರಿಯ ಮೊದಲನೇ ಮಹಡಿ ಕೊಠಡಿ ಸಂಖ್ಯೆ 4ರಲ್ಲಿರುವ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಭೇಟಿ ನೀಡಬಹುದು. ದೂ.08394-267038.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement