ಬರುವ ಹತ್ತರಂದು ನಾಡಿನಲ್ಲಿ ಅಭಿಮಾನಿಗಳು ಬಹುಸಂಭ್ರಮದಿಂದ ಅವರ ವಿಚಾರ ಪರ ಚಿಂತನೆಗೆ ಒತ್ತು ಕೊಟ್ಟು ಆಚರಿಸುತ್ತಾರೆ. ಅಂತೆಯೇ ಬಸವಣ್ಣನವರು ತಾವು ಸ್ಥಾಪಿಸಿದ ಅನುಭವ ಮಂಟಪದ ಮೂಲಕ ಜಗತ್ತಿಗೆ ನೀಡಿದ ಆದರ್ಶ ಮೌಲ್ಯಗಳನ್ನು ಸಂಪಾದಿಸಿ ಕೊಟ್ಟಿದ್ದಾರೆ” ರುದ್ರಮೂರ್ತಿ ಎಂ. ಜೆ
ಸಾಂಸ್ಕೃತಿಕ ನಾಯಕ ; ವಿಶ್ವಗುರು ; ಮಹಾ ಮಾನವತವಾದಿ ; ಬಂಡಾಯಗಾರ ಎಂಬೆಲ್ಲಾ ಉಪಮೆಗಳಿಂದ ಕರೆಯಲ್ಪಡುವ
ಬಸವಣ್ಣ ಮತ್ತವರ ಕಲ್ಯಾಣದ ಕೊಡುಗೆಗಳನ್ನು ಈ ಕೆಳಕಂಡಂತೆ ನೋಡಬಹುದು.
1.ವಿಶ್ವದ ಪ್ರಥಮ ಸಂಸತ್ತು- ಅನುಭವ ಮಂಟಪ. ಪ್ರಜಾಪ್ರಭುತ್ವದ ತಳಹದಿಯ ಮೇಲೆ ನಿರ್ಮಿತವಾದ ಅಪರೂಪದ ಮಹಾಸಂಸ್ಥೆ ನಿಸರ್ಗ ತತ್ವಕ್ಕೆ ಒತ್ತು ನೀಡಿ ಹೊಸತನದ ಸಂಚಲನ ಮೂಡಿಸಿದ ಮಂಟಪ.
2 .ಆರ್ಥಿಕ ಸಮಾನತೆ, ಸಾಮಾಜಿಕ,ಶೈಕ್ಷಣಿಕ, ಸಾಂಸ್ಕೃತಿಕ, ಏಕತೆಯಂತಹ ಶ್ರೇಷ್ಠ ಮತ್ತು ಉದಾತ ಧ್ಯೇಯಗಳು ಅನುಭವ ಮಂಟಪದ ಮೂಲ ಮಂತ್ರಗಳು.
- ರಾಜಕೀಯ ನೀತಿ : ಮಂತ್ರಿಗೂ -ಸೇವಕನಿಗೂ ಸಮಾನ ಗೌರವ.
4 . ಪರುಷಕಟ್ಟೆ -ಪ್ರಜೆಗಳ ಕಷ್ಟಗಳನ್ನು ಆಲಿಸುವ ‘ಜನಸ್ಪಂದನ’
- ಸಾಮಾಜಿಕ ನೀತಿ : ಸಮಾನತೆ
6 . ಶಿಕ್ಷಣ ನೀತಿ : ಸರ್ವರಿಗೂ ಸಾಕ್ಷರತೆ, ಮಾತೃಭಾಷಾ ಶಿಕ್ಷಣ
7 .ಆರ್ಥಿಕ ನೀತಿ – ಕಾಯಕ ಮತ್ತು ದಾಸೋಹ 8 .ಕಾಯಕದಲ್ಲಿ ಮೇಲು – ಕೀಳಲಿಲ್ಲ ಎನ್ನುವ ಪರಿಕಲ್ಪನೆ( ಡಿಗ್ನಿಟಿ ಆಫ್ ಲೇಬರ್)
9 .ಸಾಹಿತ್ಯ : ಜಗತ್ತಿಗೆ ಕೊಟ್ಟ ಶ್ರೇಷ್ಠ ಕೊಡುಗೆ – ವಚನ ಸಾಹಿತ್ಯ
10 .ನಿರ್ಭಯ ಜಗತ್ತು ನಿರ್ಮಾಣ
11 . ಮನಶಾಸ್ತ್ರ – ವಿಜ್ಞಾನದ ಪರಿಕಲ್ಪನೆಯಲ್ಲಿ : ಇಷ್ಟ ಲಿಂಗ
- ಧಾರ್ಮಿಕ ಸಮಾನತೆಯಾಗಿಯೂ ಇಷ್ಟಲಿಂಗ: “ಜನಸಾಮಾನ್ಯರಿಗೆ ಮರೀಚಿಕೆಯಾದ ದೇವರು ಅಂಗೈಯಲ್ಲಿ”
13 .ವಿಶ್ವಸಂಸ್ಥೆಯ ಈಗಿನ ಎಲ್ಲಾ ಕಾಯ್ದೆಗಳು, ಜಗತ್ತಿನ ಎಲ್ಲ ಪ್ರಜಾಸತ್ತಾತ್ಮಕ ಸಂವಿಧಾನಗಳ ಆಶಯಗಳೆಲ್ಲವೂ ಬಸವಣ್ಣನವರ ಆಶಯಗಳಲ್ಲಿವೆ.
- ಬಹುತೇಕ ದೇಶಗಳ – ವಿಶ್ವಸಂಸ್ಥೆಯ ನ್ಯಾಯಾಂಗ ವ್ಯವಸ್ಥೆಯ ಆಶಯಗಳೆಲ್ಲವೂ ಬಸವ ಯುಗದ ಕೊಡುಗೆ.
15 . ಪರಿಸರವಾದ – ಜಾಗತಿಕ ಶಾಂತಿ : ಬಸವಯೋಗದ ಪರಿಕಲ್ಪನೆಗಳು
16 . ಮಾರ್ಟಿನ್ ಲೂಥರ್ ಗಿಂತ ಮೊದಲು – ಜಡವ್ಯವಸ್ಥೆಯ ವಿರುದ್ಧ ದಂಗೆ ಎದ್ದ “ಪ್ರಥಮ ಬಂಡಾಯ ” ಬಸವಣ್ಣನವರದ್ದು
17 . ಮಾನವೀಯತೆ, ಪ್ರಶ್ನಿಸುವಿಕೆ, ವೈಚಾರಿಕತೆ, ವಿಮರ್ಶಾ ಪ್ರವೃತ್ತಿ, ಸ್ವತಂತ್ರ ಚಿಂತನೆ, ಕೌತುಕತೆ, ಜಾತ್ಯತೀತತೆ – ಮಾರ್ಟಿನ್ ಲೂಥರ್ ನ.ಮತ ಸುಧಾರಣೆಯ ಏಳು ಅಂಶಗಳು. ಇವೆಲ್ಲವಗಳನ್ನೂ ಬಸವಣ್ಣನವರು ಮಾರ್ಟಿನ್ ಲೂಥರ್ ಗಿಂತ 200 ವರ್ಷಗಳ ಮೊದಲೇ ಕಲ್ಯಾಣದಲ್ಲಿ ಚಾಲನೆಗೆ ತಂದಿದ್ದರು.
18 .”ಶರಣತ್ವ” ಉದಯಿಸಿತು. “ಕಾಯಕ” ದೇವರನ್ನು ತಲುಪ ಮಾರ್ಗವಾಯಿತು.
19 . ಕಾಯಕ ಜೀವಿಗಳ ಮಹಾಸಾಮ್ರಾಜ್ಯ ನಿರ್ಮಾಣವಾಯಿತು.
20 .ಒತ್ತಡ ಹಾಕಿದಷ್ಟೂ ಚಿಮ್ಮುವ ಮಹಾ ಚಿಲುಮೆ ಬಸವ ತತ್ವ
21 .ಒಪ್ಪಿಕೊಳ್ಳುವ – ಒಪ್ಪಿಕೊಳ್ಳುವ ಗುಣ : ಈ ಕಾಲಘಟ್ಟದ ಜಾಗತಿಕ ಸೌಹಾರ್ದತೆಗೆ ಮಾರ್ಗದರ್ಶಿ
22 . ಅಷ್ಟಾವರಣಗಳು,ಷಟಸ್ಥಲಗಳು, ಪಂಚಾಚಾರಗಳು – ಸರ್ವಕಾಲಿಕ ದಾರಿಯ ಬುತ್ತಿಗಳು