ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು : ಜೈಲುಗಳಲ್ಲಿ ಜಾತಿ ತಾರತಮ್ಯ ನಿಲ್ಲಿಸಿ

ನವದೆಹಲಿ: ದೇಶದ ಕೆಲವು ರಾಜ್ಯಗಳ ಜೈಲು ಕೈಪಿಡಿಗಳು ಜಾತಿ ಆಧಾರಿತ ತಾರತಮ್ಯವನ್ನು ಪ್ರೋತ್ಸಾಹಿಸುತ್ತಿವೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಗುರುವಾರ ಪ್ರಕರಣದ ತೀರ್ಪನ್ನು ಪ್ರಕಟಿಸಿದೆ. ಹೌದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ಕೈದಿಗಳ ವಿರುದ್ಧ ತಾರತಮ್ಯಕ್ಕೆ ಜಾತಿ ಕಾರಣವಾಗಬಾರದು. ಅಂತಹ ವಿಷಯಗಳನ್ನು ಅನುಮತಿಸಲಾಗುವುದಿಲ್ಲ ಎಂದು ಆದೇಶ ಹೊರಡಿಸಿದೆ. ಕೆಲಸದ ವಿಚಾರದಲ್ಲಿ ಎಲ್ಲರಿಗೂ ಸಮಾನ ಹಕ್ಕು ನೀಡಬೇಕು. ಅಪಾಯಕಾರಿಯಾದ ಕೊಳಚೆ ತೊಟ್ಟಿಗಳನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಕೈದಿಗಳಿಗೆ ಅವಕಾಶ ನೀಡಬಾರದು. ಒಂದು ಜಾತಿಯವರನ್ನು ಕಸಗುಡಿಸುವವರನ್ನಾಗಿ ಆಯ್ಕೆ ಮಾಡುವುದು ಸಮಾನತೆಯ ಹಕ್ಕಿಗೆ ವಿರುದ್ಧವಾಗಿದೆ ಎಂದು ವಿವರಿಸಿದ್ದಾರೆ. ಕೆಳ ಜಾತಿಯ ಕೈದಿಗಳಿಗೆ ಶೌಚಗೃಹ ಸ್ವಚ್ಛತೆ, ಕಸ ಗುಡಿಸುವುದು, ಮೇಲ್ಜಾತಿಯವರು ಅಡುಗೆ ಕೆಲಸಗಳನ್ನು ಹಂಚುವುದು ಸೇರಿದಂತೆ ಜೈಲೊಳಗಿನ ಕೆಲಸಗಳು ತಾರತಮ್ಯದಿಂದ ಕೂಡಿವೆ ಎಂದು ಪೀಠ ಸ್ಪಷ್ಟಪಡಿಸಿದೆ. ಇಂತಹ ಕೃತ್ಯಗಳು ಅಸ್ಪೃಶ್ಯತೆ ಅಡಿಯಲ್ಲಿ ಬರುತ್ತವೆ. ಕೈದಿಗಳನ್ನು ಜಾತಿಯ ಆಧಾರದ ಮೇಲೆ ಪ್ರತ್ಯೇಕಿಸುವುದು ಬದಲಾವಣೆಯನ್ನು ತರುವುದಿಲ್ಲ ಮತ್ತು ಅವರ ಆತ್ಮಗೌರವವನ್ನು ಉಲ್ಲಂಘಿಸುವುದು ವಸಾಹತುಶಾಹಿಯ ಸಂಕೇತವಾಗಿದೆ ಎಂದು ಅದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ಪರಿಶಿಷ್ಟ ಜಾತಿಯ ಕೈದಿಗಳಿಗೆ ಮಾತ್ರ ಸ್ವಚ್ಛತಾ ಕೆಲಸ, ಅಡುಗೆ ಕೆಲಸ ಮೇಲ್ಜಾತಿ ಕೈದಿಗಳಿಗೆ ನೀಡಿರುವುದು ಆಘಾತಕಾರಿ. ಇದು ಕಲಂ 15ರ ಉಲ್ಲಂಘನೆಯಾಗಿದೆ. ತಿಂಗಳೊಳಗೆ ಇದನ್ನು ಸರಿಪಡಿಸಬೇಕು ಎಂದು ಸುಪ್ರೀಂ ಕೋರ್ಟ್​ ಆದೇಶದಲ್ಲಿ ಎಚ್ಚರಿಕೆ ನೀಡಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement