ಆಂಧ್ರಪ್ರದೇಶ: ಹೌದು ನೆರೆಯ ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಹಕ್ಕಿ ಜ್ವರದ ಹಾವಳಿ ಹೆಚ್ಚಿದ್ದು, ಇನ್ನೂ ಮುಂದುವರಿದಿದೆ. ಇತರೆ ಪ್ರದೇಶಗಳಿಗೆ ಹರಡದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ಇದರ ಭಾಗವಾಗಿ ಫಾರಂನಲ್ಲಿರುವ ಕೋಳಿ, ಮೊಟ್ಟೆಗಳನ್ನು ನಾಶಪಡಿಸಲಾಗುತ್ತಿದೆ. ರೆಸ್ಟೋರೆಂಟ್ ಹಾಗೂ ಹೋಟೆಲ್ ಗಳಲ್ಲಿ ಚಿಕನ್ ಖಾದ್ಯ ನೀಡದಂತೆ ನೋಟಿಸ್ ನೀಡಲಾಗುತ್ತಿದೆ. ಕೋಳಿಗಳ ಆಮದು ಹಾಗೂ ರಫ್ತನ್ನೂ ನಿಷೇಧಿಸಲಾಗುತ್ತಿದ್ದು, ಚೆಕ್ ಪೋಸ್ಟ್ಗಳಲ್ಲಿ ಬಿಗಿ ಭದ್ರತೆಯಲ್ಲಿ ತಪಾಸಣೆ ಮಾಡಲಾಗುತ್ತಿದೆ.