ಬೆಂಗಳೂರು : ಕರ್ನಾಟಕ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ (KSEAB) 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ವಿದ್ಯಾರ್ಥಿಗಳಲ್ಲಿ ಒತ್ತಡ ಮತ್ತು ಆತಂಕವನ್ನ ಕಡಿಮೆ ಮಾಡಲು ಮತ್ತು ಉತ್ತಮ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನ ಸೃಷ್ಟಿಸಲು ಈ ವರ್ಷ ಕರ್ನಾಟಕ ಬೋರ್ಡ್ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು 1, 2 ಮತ್ತು 3 ಪರೀಕ್ಷೆಗಳಾಗಿ ನಡೆಸಲಾಗುವುದು
ಮಾರ್ಚ್ 1 ರಿಂದ 22 ರವರೆಗೆ ಪಿಯುಸಿ ಪರೀಕ್ಷೆ ನಡೆದಿದ್ದು, ಫಲಿತಾಂಶವನ್ನು ಇಂದು ಅಪ್ಲೋಡ್ ಮಾಡಲಾಗಿದೆ. ಎರಡನೇ ಮತ್ತು ಮೂರನೇ ಪರೀಕ್ಷೆಗಳನ್ನು ಕ್ರಮವಾಗಿ ಏಪ್ರಿಲ್ / ಮೇ ಮತ್ತು ಜುಲೈನಲ್ಲಿ ನಡೆಸಲಾಗುವುದು.
ಏಪ್ರಿಲ್ 29 ರಿಂದ 16 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ಮೊದಲ ಪರೀಕ್ಷೆಯು ಕನ್ನಡ, ಇತಿಹಾಸ, ಅರೇಬಿಕ್ ಮತ್ತು ಭೌತಶಾಸ್ತ್ರ ವಿಷಯಗಳೊಂದಿಗೆ ಪ್ರಾರಂಭವಾಗಲಿದೆ