ದಾಹೊದ್: ಅನೈತಿಕ ಸಂಬಂಧದ ಶಂಕೆ ಮೇಲೆ ಬುಡಕಟ್ಟು ಸಮುದಾಯದ 35 ವರ್ಷದ ಮಹಿಳೆಯೊಬ್ಬರನ್ನು ಗುಂಪೊಂದು ಬೆತ್ತಲೆಗೊಳಿಸಿ, ಥಳಿಸಿ ಮೆರವಣಿಗೆ ಮಾಡಿದ್ದ 12 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಸಂಜೇಲಿ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಜ. 28ರಂದು ಈ ಘಟನೆ ನಡೆದಿದೆ. ಸಂತ್ರಸ್ತೆಯ ಮಾವ ಮತ್ತು ಗಂಡನ ಸಹೋದರನ ನೇತೃತ್ವದಲ್ಲೇ ಗುಂಪು ಈ ಕೃತ್ಯ ಎಸಗಿದೆ. ಜ. 29ರಂದು 15 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜದೀಪ್ಸಿನ್ಹಾ ಜಾಲಾ ತಿಳಿಸಿದ್ದಾರೆ.