ನವದೆಹಲಿ : ಭಾರತ ಮತ್ತು ಪಾಕಿಸ್ತಾನ ಸಂಘರ್ಷದ ಸಮಯದಲ್ಲಿ ಪಾಕ್ ಪರವಾಗಿ ನಿಂತ ಟರ್ಕಿ ವಿರುದ್ಧ ದೇಶದಲ್ಲಿ ಬಹಿಷ್ಕಾರ ಅಭಿಯಾನವೇ ಶುರುವಾಗಿದೆ. ಭಾರತೀಯರು ಟರ್ಕಿ ಪ್ರವಾಸಗಳನ್ನು ರದ್ದು ಮಾಡುತ್ತಿದ್ದಾರೆ, ಅಲ್ಲದೆ ಸೇಬು, ಅಮೃತಶಿಲೆ ಸೇರಿದಂತೆ ಟರ್ಕಿ ಉತ್ಪನ್ನಗಳ ಪೂರೈಕೆಗೂ ಬಹಿಷ್ಕಾರ ಹಾಕಲಾಗಿತ್ತು. ಇದೀಗ ಆಭರಣ ವರ್ತಕರು ಟರ್ಕಿ ಆಭರಣಗಳಿಗೂ ಬಹಿಷ್ಕಾರ ಹಾಕಿದ್ದಾರೆ.
ಹೌದು ಆಭರಣ ವರ್ತಕರು ಟರ್ಕಿ ಆಭರಣಗಳ ಖರೀದಿ ಮತ್ತು ಮಾರಾಟ, ಪ್ರದರ್ಶನಕ್ಕೆ ಬಹಿಷ್ಕಾರ ಹಾಕಿದ್ದಾರೆ. ಇದರೊಂದಿಗೆ ಕಿವಿಯೋಲೆಗಳು ಮತ್ತು ನೆಕ್ಲೇಸ್‌ನಂತಹ ದೊಡ್ಡ ಗಾತ್ರದ ಆಭರಣಗಳಿಗೆ ನೀಡಲಾಗುತ್ತಿದ್ದ ಟರ್ಕಿಶ್ ಟ್ಯಾಗ್ ಅನ್ನು ತೆಗೆದು ಸಿಂಧೂರ್ ಎಂದು ಹೆಸರಿಡಲು ಮುಂದಾಗಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಟರ್ಕಿಶ್ ಆಭರಣಗಳಿಗೆ ಬಹು ಬೇಡಿಕೆಯಿದೆ. ಆದರೆ ಇದೀಗ ಆಭರಣ ವರ್ತಕರು ಟರ್ಕಿ ಆಭರಣಗಳ ಖರೀದಿ ಮತ್ತು ಮಾರಾಟ, ಪ್ರದರ್ಶನಕ್ಕೆ ಬಹಿಷ್ಕಾರ ಹಾಕಿದ್ದಾರೆ. ಜೊತೆಗೆ ಭಾರತದಲ್ಲಿ ಆ ದೇಶದ ಆಭರಣಗಳ ಹೆಸರನ್ನು ಬದಲಾಯಿಸಲಾಗಿದೆ. ಆಭರಣಗಳಿಗೆ ನೀಡುತ್ತಿದ್ದ ಟರ್ಕಿಶ್ ಎಂಬ ಟ್ಯಾಗ್ ತೆಗೆದು ಸಿಂಧೂರ್ ಎಂಬ ಹೆಸರನ್ನು ಮರುನಾಮಕರಣ ಮಾಡಲಾಗಿದೆ. ‘ಟರ್ಕಿಶ್ ಆಭರಣಗಳನ್ನು ಇನ್ನು ಮುಂದೆ ಭಾರತದಲ್ಲಿ ‘ಸಿಂಧೂರ್ ಆಭರಣ’ ಎಂದು ಕರೆಯಲಾಗುತ್ತದೆ ಎಂದು ಹೇಳಲಾಗಿದೆ.