ಚಾಮರಾಜನಗರ : ಕೊಳ್ಳೇಗಾಲ ತಾಲೂಕಿನಲ್ಲಿ ಹುಲಿ ಉಗುರು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಸಂಚಾರ ದಳದ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಮೈಸೂರಿನ ದೊಡ್ಡ ಹರವೆ ಗ್ರಾಮದ ನವೀನ್ ಕುಮಾರ್, ಹೆಚ್.ಡಿ ಕೋಟೆ ಆಲನಹಳ್ಳಿಯ ಕುಮಾರ ನಾಯಕ್ ಬಂಧಿತ ಆರೋಪಿಗಳು. ಬೈಕ್ನಲ್ಲಿ ಹುಲಿ ಉಗುರು ಸಾಗಿಸುತ್ತಿದ್ದ ಆರೋಪಿಗಳು, ಅರಣ್ಯ ಸಂಚಾರ ದಳದ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತರಿಂದ ನಾಲ್ಕು ಹುಲಿ ಉಗುರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.
ವ್ಯಾಘ್ರ ಉಗುರನ್ನು ಪದಕವನ್ನಾಗಿ ಧರಿಸುವುದರಿಂದ ಹೃದಯಕ್ಕೆ ಹತ್ತಿರವಾಗಿ ಧರಿಸುವುದು ಅದೃಷ್ಟ ಮತ್ತು ರಕ್ಷಣೆಯನ್ನು ತರುತ್ತದೆ. ಹುಲಿ ಉಗುರಿನ ಲಾಕೆಟ್ ಧರಿಸುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ಹಿಂದಿನಿಂದಲೂ ನಂಬಿಕೊಂಡು ಬರಲಾಗಿದೆ. ಆದುದರಿಂದ ಹುಲಿ ಉಗುರಿನ ಅಕ್ರಮ ಸಾಗಾಟ ನಡೆಯುತ್ತೆ. ಆದರೆ ಇದು ಕಾನೂನು ಬಾಹಿರ.