ಬಾರಾಬಂಕಿ: ಒಂದೇ ಹಳ್ಳಿಯ ಸ್ನೇಹಿತರಿಬ್ಬರು ತಮ್ಮ ಹೆಂಡತಿಯರನ್ನು ಪರಸ್ಪರ ವಿನಿಯಮ ಮಾಡಿಕೊಂಡಿದ್ದಾರೆ. ವಿಚಿತ್ರವೆನಿಸಿದರೂ ನಿಜದ ಘಟನೆ ಇದು. ಯಾವ ಸಿನಿಮಾದಲ್ಲೂ ನೋಡಿರದ ವಿಚಿತ್ರವಾದ ಕತೆ ಇದು.
ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಈ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ. ಆಗಾಗ ಗೆಳೆಯನ ಮನೆಗೆ ಹೋಗುತ್ತಿದ್ದ ಯುವಕನಿಗೆ ತನ್ನ ಹೆಂಡತಿಗಿಂತ ಆಕೆಯೇ ತನಗೆ ಒಳ್ಳೆಯ ಜೋಡಿ ಎನಿಸಿತ್ತು. ಹೀಗಾಗಿ, ಆತ ಗೆಳೆಯನ ಹೆಂಡತಿಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಿ ಆಕೆಯೊಂದಿಗೆ ವಾಸವಾಗಿದ್ದಾನೆ.
ಅದೇ ರೀತಿ ಆತನ ಗೆಳೆಯ ಕೂಡ ಇವನ ಹೆಂಡತಿಯೊಂದಿಗೆ ಸಂಸಾರ ನಡೆಸುತ್ತಿದ್ದಾನೆ! ಇದೆಂಥಾ ಎಕ್ಸ್ಚೇಂಜ್ ಆಫರ್ ಎಂದು ನಿಮಗೆ ಅಚ್ಚರಿಯಾಗುವುದರಲ್ಲಿ ಅನುಮಾನವೇ ಇಲ್ಲ. ಗೆಳೆಯನ ಹೆಂಡತಿಯನ್ನು ಕೋರ್ಟ್ನಲ್ಲಿ ಮದುವೆಯಾಗಿರುವ ಯುವಕ ಆಕೆಯೊಂದಿಗೆ ಜೀವನ ನಡೆಸುತ್ತಿದ್ದಾನೆ. ಹೀಗಾಗಿ, ಅನಿವಾರ್ಯವಾಗಿ ಗಂಡನಿಗೆ ಬೇಡವಾದ ಹೆಂಡತಿ ಹಾಗೂ ಹೆಂಡತಿಗೆ ಬೇಡವಾದ ಗಂಡ ಇಬ್ಬರೂ ಸೇರಿ ಈಗ ದಾಂಪತ್ಯ ನಡೆಸುತ್ತಿದ್ದಾರೆ! ಅನೂಪ್ ಎಂಬ ಯುವಕ ಈ ಬಗ್ಗೆ ದೂರು ನೀಡಿದ್ದಾನೆ. ತನ್ನ ಹೆಂಡತಿಯನ್ನು ತನ್ನ ಸ್ನೇಹಿತ ಪಪ್ಪು ಆತನ ಜತೆ ವಾಸಿಸುವಂತೆ ಒತ್ತಾಯಿಸಿ ಕರೆದುಕೊಂಡು ಹೋಗಿದ್ದಾನೆ. ಹೀಗಾಗಿ, ನಾನು ಅನಿವಾರ್ಯವಾಗಿ ಪಪ್ಪುವಿನ ಹೆಂಡತಿಯೊಂದಿಗೆ 4 ತಿಂಗಳಿನಿಂದ ವಾಸಿಸುತ್ತಿದ್ದೇನೆ ಎಂದು ಅನೂಪ್ ಹೇಳಿದ್ದಾನೆ. ಪಪ್ಪು ಇದಕ್ಕೆ ಪ್ರತಿಕ್ರಿಯಿಸಿದ್ದು, ಅನೂಪ್‌ನ ಹೆಂಡತಿಯನ್ನು ಅವನ ಮನೆಗೆ ಕಳುಹಿಸಿದಾಗಲೆಲ್ಲಾ ಆತ ಆಕೆಗೆ ಹೊಡೆಯುತ್ತಾನೆ. ನನ್ನ ಹೆಂಡತಿ ಸವಿತಾ ಕೂಡ ಇದಕ್ಕೆ ಬೆಂಬಲ ನೀಡುತ್ತಿದ್ದಾಳೆ. ನನ್ನ ಹೆಂಡತಿಯೂ ಅನೂಪ್ ಹೆಂಡತಿಯೊಂದಿಗೆ ನಾನು ಕೋರ್ಟ್‌ನಲ್ಲಿ ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಾಳೆ.
ಹೀಗಾಗಿ, ನಾನು ಮತ್ತು ಅನೂಪನ ಹೆಂಡತಿ 4 ತಿಂಗಳಿನಿಂದ ಒಟ್ಟಿಗೆ ವಾಸಿಸುತ್ತಿದ್ದೇವೆ ಎಂದಿದ್ದಾರೆ. ಅನೂಪ್ ಪತ್ನಿ ಲೋನಿ ಕತ್ರಾ ನಿವಾಸಿ. ತಾನು ಅನುಪ್ ಜತೆ ಎರಡು ವರ್ಷಗಳ ಹಿಂದೆ ಮದುವೆಯಾಗಿರುವುದಾಗಿ ಆಕೆ ಹೇಳಿದ್ದಾಳೆ. ಮದುವೆಯಾದ ಕೆಲವು ದಿನಗಳ ನಂತರ ಅನೂಪ್ ನನ್ನನ್ನು ಹೊಡೆಯಲು ಪ್ರಾರಂಭಿಸಿದ. ಜಗಳ ಮತ್ತು ಹಲ್ಲೆಯ ನಂತರ ಅನೂಪ್ ನನ್ನನ್ನು ನನ್ನ ತಾಯಿಯ ಮನೆಯಲ್ಲಿ ಬಿಟ್ಟು ಹೋಗಿದ್ದಾಗಿ ಆಕೆ ಹೇಳಿದ್ದಾಳೆ. ನಂತರ, ನಾನು ಸುಮಾರು ಒಂದೂವರೆ ವರ್ಷ ನನ್ನ ತಾಯಿಯ ಮನೆಯಲ್ಲಿದ್ದೆ. ನಂತರ ನನ್ನ ತಾಯಿಯ ಮನೆಯವರು ನನ್ನ ಮನವೊಲಿಸಿ ಅತ್ತೆಯ ಮನೆಗೆ ಕಳುಹಿಸಿದರು. ನಾನು ನನ್ನ ತಾಯಿಯ ಮನೆಯಿಂದ ಬಂದಾಗಿನಿಂದ, ಅನೂಪ್ ಪಪ್ಪು ಜತೆ ವಾಸಿಸಲು ನನ್ನ ಮೇಲೆ ಒತ್ತಡ ಹೇರುತ್ತಿದ್ದಾನೆ ಎಂದು ಆಕೆ ಹೇಳಿದ್ದಾಳೆ. ನಾನು ಪಪ್ಪು ಜತೆ ಹೋಗಲು ಒಪ್ಪದಿದ್ದರೆ ನನ್ನನ್ನು ಕೊಲ್ಲುವುದಾಗಿ ಗಂಡ ಬೆದರಿಕೆ ಹಾಕುತ್ತಾನೆ.
ನೀನು ಪಪ್ಪು ಜತೆ ಗಂಡ ಹೆಂಡತಿಯಂತೆ ಬದುಕಬೇಕು ಎಂದು ಹೆದರಿಸಿದ್ದಾನೆ ಎಂದು ಆಕೆ ಹೇಳಿದ್ದಾಳೆ. ನಾನು ಮನೆಯಲ್ಲಿ ಇಲ್ಲದಿದ್ದಾಗ ಅನೂಪ್ ಆಗಾಗ ನನ್ನ ಮನೆಗೆ ಬರುತ್ತಿದ್ದ. ಈ ಮಧ್ಯೆ, ನನ್ನ ಹೆಂಡತಿ ಮತ್ತು ಅನೂಪ್ ನಡುವೆ ಆತ್ಮೀಯತೆ ಹೆಚ್ಚಾಯಿತು. ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿದೆ. ಅನೂಪ್ ನನ್ನ ಹೆಂಡತಿಯನ್ನು ಯಾವುದೇ ಕಾರಣಕ್ಕೂ ಬಿಟ್ಟು ಹೋಗುತ್ತಿಲ್ಲ. ಇಬ್ಬರೂ 4 ತಿಂಗಳಿನಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ. ಇಬ್ಬರೂ ಕೋರ್ಟ್ ಮದುವೆಯನ್ನೂ ಮಾಡಿಕೊಂಡಿದ್ದಾರೆ. ನನ್ನ ಹೆಂಡತಿ ನನಗೆ 10 ಸಾವಿರ ರೂಪಾಯಿಗಳನ್ನು ನೀಡಿ, ನಾನು ಕೂಡ ಅನೂಪನ ಪತ್ನಿಯೊಂದಿಗೆ ಕೋರ್ಟ್ ಮದುವೆ ಮಾಡಿಕೊಳ್ಳಬೇಕೆಂದು ಒತ್ತಡ ಹಾಕುತ್ತಿದ್ದಾಳೆ ಎಂದು ಪಪ್ಪು ಆರೋಪಿಸಿದ್ದಾರೆ.