ನೆಲ್ಯಾಡಿ: ಕೆ ಎಸ್ ಆರ್ ಟಿ ಸಿ ಯ ಎರಡು ಬಸ್ಸುಗಳ ನಡುವೆ ಸಕಲೇಶಪುರ ತಾಲೂಕು ಶಿರಾಡಿ ಘಾಟ್ ನ ಮಾರನಹಳ್ಳಿ ಬಳಿ ಮುಖಮುಖಿ ಡಿಕ್ಕಿ ಸಂಭವಿಸಿ 25 ಪ್ರಯಾಣಿಕರು ಗಾಯಗೊಂಡಿದ್ದಾರೆ.
ಆ ಪೈಕಿ ಎಂಟು ಪ್ರಯಾಣಿಕರಿಗೆ ಹಾಗೂ ಒಬ್ಬ ಬಸ್ ಚಾಲಕನಿಗೆ ಗಂಭೀರ ಪೆಟ್ಟು ಬಿದ್ದಿದೆ.
ಗುರುವಾರ ಮಧ್ಯಾಹ್ನ ಈ ಅವಘಡ ಸಂಭವಿಸಿದೆ. ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಬಸ್ ಹಾಗೂ ಧರ್ಮಸ್ಥಳದಿಂದ ಮಂಗಳೂರಿಗೆ ಹೋಗುತ್ತಿದ್ದ ಬಸ್ ಗಳ ನಡುವೆ ಡಿಕ್ಕಿ ಸಂಭವಿಸಿದೆ.
ಗಾಯಾಳುಗಳನ್ನು ಸಕಲೇಶಪುರದ ಸರಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.