ಕಾರವಾರ: ಸಿದ್ದಾಪುರದ ನಿಲ್ಕುಂದ ಸಮೀಪದ ವಾಟೆಹೊಳೆ ಜಲಪಾತಕ್ಕೆ ಕಾಲು ಜಾರಿ ಬಿದ್ದು ಇಬ್ಬರು ಯುವಕರು ನೀರುಪಾಲಾದ ಘಟನೆ ನಡೆದಿದೆ.
ಜಲಪಾತಕ್ಕೆ ಆರು ಜನ ಯುವಕರು ತೆರಳಿದ್ದ ವೇಳೆ ಶಿರಸಿ ಮೂಲದ ಸುಹಾಸ್ ಶಟ್ಟಿ (22) ಹಾಗೂ ಅಕ್ಷಯ್ ಭಟ್ (22) ಕಾಲುಜಾರಿ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮುಳುಗು ತಜ್ಞರು ಆಗಮಿಸಿ ಶೋಧಕಾರ್ಯ ನಡೆಸಿ ನಂತರ ಮೃತದೇಹವನ್ನು ಹೊರತೆಗೆದಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.