ಉಡುಪಿ ಜಿಲ್ಲೆಯ ಪ್ರಸಿದ್ದ ಪ್ರವಾಸಿ ಆಕರ್ಷಣೆಯ ತಾಣವಾದ ಮಲ್ಪೆ ಸೈಂಟ್ ಮೇರಿಸ್ ದ್ವೀಪಕ್ಕೆ ಸಾರ್ವಜನಿಕ ಪ್ರವಾಸಿಗರಿಗೆ ಭೇಟಿಯನ್ನು ಮುಂದಿನ 4 ತಿಂಗಳ ಕಾಲ ನಿರ್ಬಂಧಿಸಲಾಗಿದೆ.
ಜತೆಗೆ ಎಲ್ಲಾ ಜಲಸಾಹಸ ಕ್ರೀಡೆಗಳನ್ನು ಅಲ್ಲಿಯ ತನಕ ಸ್ಥಗಿತಗೊಳಿಸಲಾಗಿದೆ. ಮಳೆಗಾಲದಲ್ಲಿ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವ ಕಾರಣ ದ್ವೀಪಕ್ಕೆ ತೆರಳುವುದು ಅಪಾಯಕಾರಿ ಎಂಬ ಕಾರಣಕ್ಕಾಗಿ ಪ್ರತಿ ವರ್ಷ ಮೇ 15 ರಿಂದ ಸಪ್ಟೆಂಬರ್ 15 ರ ತನಕ ಜಿಲ್ಲಾಡಳಿತ ನಿರ್ಬಂಧ ಹೇರುತ್ತದೆ.
ಮಳೆಗಾಲದಲ್ಲಿ ಪಶ್ಚಿಮ ಕರಾವಳಿಯಲ್ಲಿ ಬೋಟ್ ಚಲಾಯಿಸಲು ಅನುಮತಿ ಇರುವುದಿಲ್ಲ. ಹಾರ್ಬರ್ ಕ್ರಾಫ್ಟ್ ನಿಯಮಗಳ ಪ್ರಕಾರ ಸ್ಥಗಿತಗೊಳಿಸಲಾಗಿದೆ. ನಿಯಮಗಳ ಪ್ರಕಾರ ಮೇ 16 ರಿಂದ 4 ತಿಂಗಳು ನಿಷೇಧವಿರಲಿದೆ.
ಆದರೆ ಸಮುದ್ರತೀರದಲ್ಲಿ ವಾತಾವರಣದ ಅನುಕೂಲ ಆಧರಿಸಿ ಜೂನ್ 1 ರ ತನಕ ನೀರಿಗಿಳಿಯಬಹುದಾಗಿದೆ. ಬಳಿಕ ಬೀಚ್ ಉದ್ದಕ್ಕೂ ತಡೆ ಬೇಲಿ ಹಾಕಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ.