ಉಡುಪಿ: ಮದುವೆ ನಿರಾಕರಿಸಿ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಆಕ್ರೋಶಗೊಂಡ ಯುವಕ ಯುವತಿಗೆ ಚೂರಿ ಇರಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ಬ್ರಹ್ಮಾವರ ತಾಲೂಕು ಕೊಕ್ಕರ್ಣೆಯಲ್ಲಿ ನಡೆದಿದೆ.
ಯುವತಿ ರಕ್ಷಿತಾ ಪೂಜಾರಿ( 24) ಗಂಭೀರ ಗಾಯಗೊಂಡಿದ್ದು, ಮಣಿಪಾಲದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಕಲಾಗಿದೆ. ಚೂರಿ ಇರಿದ ಆರೋಪಿಯನ್ನು ಕಾರ್ತಿಕ್ ಎಂದು ಗುರುತಿಸಲಾಗಿದ್ದು, ಚೂರಿ ಇರಿದು ಇದೀಗ ಪರಾರಿಯಾಗಿದ್ದಾನೆ.
ಯುವಕ ಯುವತಿಯನ್ನು ಪ್ರೀತಿಸುತ್ತಿದ್ದು ಮದುವೆ ಆಗಬೇಕು ಎಂದು ಬಹಳ ಸಮಯದಿಂದ ಒತ್ತಾಯಿಸುತ್ತಿದ್ದ. ಆಕೆ ಆಕೆಯ ಮನೆಯವರು ಇದಕ್ಕೆ ಒಪ್ಪದಂತಹ ಹಿನ್ನೆಲೆಯಲ್ಲಿ ಇಬ್ಬರಿಗೆ ಜಗಳ ನಡೆಯುತ್ತಿತ್ತು. ಇಂದು ಗಾಯಾಳು ರಕ್ಷಿತಾ ಹುಟ್ಟಿದ ದಿನವಾಗಿ, ಮನೆಯಲ್ಲಿ ಮದುವೆಗೆ ಆಕ್ಷೇಪ ಬಂದ ಕಾರಣ ನಂಬರ್ ಕಾರ್ತಿಕ್ ನಂಬರ್ ನ್ನು ಬ್ಲಾಕ್ ಮಾಡಿದ್ದ ರಕ್ಷಿತಾ, ಇಂದು ಬೆಳಿಗ್ಗೆ ರಕ್ಷಿತಾ ಮನೆಯಿಂದ ಬಸ್ ನಿಲ್ದಾಣ ಬಳಿ ಹೋಗುವಾಗ ಪಾಗಲ್ ಪ್ರೇಮಿ ಕಾರ್ತಿಕ್ ಚೂರಿ ಇರಿದಿದ್ದಾನೆ. ಗಂಭೀರ ಸ್ಥಿತಿಯಲ್ಲಿದ್ದ ರಕ್ಷಿತಾಳನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎದೆ ಹಾಗೂ ಕತ್ತಿಗೆ ಗಂಭೀರ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.