ಬೆಂಗಳೂರು: ಕಾಮನ್ ಯೂನಿವರ್ಸಿಟಿ ಎಂಟ್ರೆನ್ಸ್ ಟೆಸ್ಟ್- UG(CUET) ಫಲಿತಾಂಶವನ್ನು ಇದೇ ತಿಂಗಳ 17ರಂದು ಪ್ರಕಟಿಸಲಾಗುವುದು ಎಂದು UGC ಚೇರ್ಮನ್ ಜಗದೀಶ್ ಕುಮಾರ್ ಪ್ರಕಟಿಸಿದ್ದಾರೆ.
ಅಭ್ಯರ್ಥಿಗಳು cuet.samarth.ac.in ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು. ಈ ವರ್ಷ CUET ಪರೀಕ್ಷೆಯನ್ನು ಮೇ 21 ರಿಂದ 23 ರವರೆಗೆ ದೇಶಾದ್ಯಂತ 387 ಕೇಂದ್ರಗಳಲ್ಲಿ ನಡೆಸಲಾಗಿತ್ತು. ಈ ಪರೀಕ್ಷೆಯ ಫೈನಲ್ ಕೀಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.