ನವದೆಹಲಿ : ರಾಜ್ಯಸಭೆಯಲ್ಲಿ ಕುತೂಹಲಕಾರಿ ಸನ್ನಿವೇಶವೊಂದು ನಡೆದಿದೆ. ಕೇಂದ್ರ ಸಚಿವ ರಾಮಮೋಹನ್ ನಾಯ್ಡು ಮಾತನಾಡು ಸಂದರ್ಭ ಅವರಿಗೆ ಗಂಟಲು ಒಣಗಿದೆ. ಆಗ ಅಲ್ಲಿನ ಸಿಬ್ಬಂದಿಗೆ ನೀರು ತರಲು ಹೇಳಿದ್ದಾರೆ. ಆದರೆ ಅವರು ನೀರು ತರುವಷ್ಟರಲ್ಲಿ ಸುಧಾ ಮೂರ್ತಿಯವರೇ ನೀರಿನ ಬಾಟಲ್ ನೀಡಿದ್ದಾರೆ. ಅದಕ್ಕೆ ಧನ್ಯವಾದ ಹೇಳಿದ ರಾಮಮೋಹನ್ ನಾಯ್ಡು ನೀವು ನಮಗೆಲ್ಲ ತಾಯಿ ಸ್ವರೂಪರಾಗಿದ್ದೀರಿ. ನಿಮ್ಮ ಮಾತೃತ್ವವನ್ನು ಸದಾ ಸಾಬೀತುಪಡಿಸುತ್ತಲೇ ಇರುತ್ತೀರಿ ಎಂದು ನಮಸ್ಕರಿಸಿದ್ದಾರೆ. ಈ ಸನ್ನಿವೇಶ ಲೋಕಸಭೆಯಲ್ಲಿ ಒಂದು ಕ್ಷಣ ಮಾತೃ ಪ್ರೇಮವನ್ನು ಭಿತ್ತಾರ ಮಾಡಿತ್ತು.
ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಈ ವೇಳೆ ಸಂಸತ್ತಿನಲ್ಲಿ ಈ ವಿಚಾರ ಜರುಗಿದೆ. ಸುಧಾಮೂರ್ತಿ ಅವರ ವಾತ್ಸಲ್ಯಕ್ಕೆ ಕೇಂದ್ರ ಸಚಿವ ರಾಮಮೋಹನ್ ನಾಯ್ಡು ಮನಸೋತು ಅವರಿಗೆ ಎರಡೂ ಕೈಗಳಿಂದ ನಮಸ್ಕರಿಸಿ ಕೃತಜ್ಞತೆ ಸಲ್ಲಿಸಿದ್ದಾರೆ. ಸದಾ ತನ್ನನ್ನು ತನ್ನ ತಾಯಿಯಂತೆಯೇ ನಡೆಸಿಕೊಂಡಿರುವುದಕ್ಕೆ ಧನ್ಯವಾದ ಎಂದು ಹೇಳಿದ್ದಾರೆ. ಎಲ್ಲರೂ ಕೈ ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.
ಸುಧಾ ಮೂರ್ತಿ ಪ್ರಸ್ತುತ ಮೂರ್ತಿ ಟ್ರಸ್ಟ್‌ನ ಅಧ್ಯಕ್ಷೆಯಾಗಿದ್ದಾರೆ. ಅವರು ಲೇಖಕಿ, ಶಿಕ್ಷಣತಜ್ಞೆ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿ ಬಹಳ ಜನಪ್ರಿಯರಾಗಿದ್ದಾರೆ. ಸುಧಾ ಮೂರ್ತಿ ಅವರು ಇನ್ಫೋಸಿಸ್ ಫೌಂಡೇಷನ್ ಮೂಲಕ ಹಲವಾರು ಅನಾಥಾಶ್ರಮಗಳನ್ನು ಸ್ಥಾಪಿಸಿದ್ದಾರೆ.