ಚಿತ್ರದುರ್ಗ : ಅಪ್ಪರ್ ಭದ್ರಾ ನೀರಾವರಿ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಘೋಷಣೆ ಹಾಗೂ ಇನ್ನೂ ಹಲವಾರು ಬೇಡಿಕೆಗಳಿಗೆ ಹಾಕ್ಕೊತ್ತಾಯ ಈಡೇರಿಸುವಂತೆ ಆಗ್ರಹಿಸಿ ಸಮಾಜವಾದಿ ಪಾರ್ಟಿ ರಾಜ್ಯಾಧ್ಯಕ್ಷ ಎನ್.ಮಂಜಪ್ಪ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗಿರುವ ಈ ವಿಎಂ ಚುನಾವಣಾ ಮತದಾನ ಪದ್ಧತಿಯನ್ನು ಪದ್ಧತಿಯನ್ನು ರದ್ದು ಮಾಡಿ ಹಿಂದೆ ಇದ್ದ ಬ್ಯಾಲೆಟ್ ನಮೂನೆ ಮತದಾನ ಪದ್ಧತಿ ಜಾರಿ ಮಾಡಬೇಕು. ದೇಶದಲ್ಲೇ ಜಾತಿ ಜನಸಂಖ್ಯೆ ಜನಗಣತಿ ಮಾಡಬೇಕು.ರಾಜ್ಯ ಸರ್ಕಾರದಲ್ಲಿ ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು, ಕಾಂತರಾಜ್ ವರದಿಯನ್ನು ಅತಿ ಶೀಘ್ರದಲ್ಲಿ ಅನುಷ್ಠಾನಗೊಳಿಸಬೇಕು, ರಾಜ್ಯದಲ್ಲಿ ಮುಂಬರುವ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಾದ ತಾಲೂಕು,ಜಿಲ್ಲಾ ಪಂಚಾಯಿತಿ, ಹಾಗೂ ಬಿಬಿಎಂಪಿ, ಮತ್ತು ನಗರಸಭೆ, ಪಟ್ಟಣ ಪಂಚಾಯಿತಿ ಚುನಾವಣೆಗಳಲ್ಲಿ ಸಮಾಜವಾದಿ ಪಾರ್ಟಿಯು ಎಲ್ಲಾ ಕಡೆ ಬೇರೆ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ನೇರವಾಗಿ ಪಕ್ಷ ಸ್ಪರ್ಧೆ ಮಾಡಲಿದೆ ಎಂದು ತಿಳಿಸಿದರು.
ಅಪ್ಪರ್ ಭದ್ರ ನೀರಾವರಿ ಯೋಜನೆಗೆ ಹಣ ಮಂಜೂರು ಮಾಡಿ. ಈ ಯೋಜನೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯಂದು ಘೋಷಣೆ ಮಾಡಬೇಕು, ತುಂಡುಗುತ್ತಿಗೆ ಆಧಾರ, ವರಸಂಪನ್ಮೂಲಧಾರ, ಕಾಂಟ್ರಾಕ್ಟ್ ಬೇಸಿಸ್, ಅತಿಥಿ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರು ಹಾಗೂ ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರನ್ನು ಸರ್ಕಾರಿ ಕಾಯಂ ನೌಕರರನ್ನಾಗಿ ಮಾಡಬೇಕು, ಹಿಂದುಳಿದ ಜಾತಿಗಳಾದ ಕಾಡುಗೊಲ್ಲ, ಕೋಳಿ ಸಮಾಜ ಉಪ್ಪಾರ, ಸಮಾಜ, ಬೆಸ್ತರನ್ನು, ರಾಜ್ಯ ಸರ್ಕಾರಗಳು ಎಸ್.ಟಿ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿರುತ್ತಾರೆ. ಕೇಂದ್ರ ಸರ್ಕಾರ ಇಲ್ಲಿಯವರೆಗೂ ಸಹ ಎಸ್.ಟಿ. ಪಟ್ಟಿಗೆ ಸೇರಿಸಿರುವುದಿಲ್ಲ ಕೂಡಲೇ ಈ ಜಾತಿಗಳಿಗೆ ಎಸ್.ಟಿ ಪಟ್ಟಿಗೆ ಸೇರಿಸಿ ಸಾಮಾಜಿಕ ನ್ಯಾಯಾವನ್ನು ಒದಗಿಸಿ ಕೊಡಲು ಒತ್ತಾಯಿಸಲಾಯಿತು.
ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕಾಗಿ ಪರಮಾಧಿಕಾರ ನೀಡಬೇಕು, ಈ ನ್ಯಾಯಯುತ ಬೇಡಿಕೆಗಳು ಆದಷ್ಟು ಬೇಗ ಈಡೇರಿಸಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಒತ್ತಾಯಿಸಿದ್ದು,ಈ ಬೇಡಿಕೆಗಳು ಈಡೇರದಿದ್ದ ಪಕ್ಷದಲ್ಲಿ ಪಕ್ಷವು ಬೀದಿಗಿಳಿದು ಹೋರಾಟ ಮಾಡಲಿದೆ ತಿಳಿಸಿದರು.
ಸಮಾಜವಾದಿ ಪಾರ್ಟಿಯ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಎಸ್.ಲಕ್ಷ್ಮೀಕಾಂತ ಮಾತನಾಡಿ, ಸರ್ಕಾರ ಕಾಲೇಜುಗಳಲ್ಲಿ ಭೋದಕೇತರ ಸಿಬ್ಬಂದಿಯನ್ನು ಭರ್ತಿ ಮಾಡಿಲ್ಲ ಒಂದು ಕಾಲೇಜು ಸರಿಯಾಗಿ ಡನೆಯಬೇಕಾದರೆ ಭೋಧಕ ಮತ್ತು ಭೋದಕೇತರ ಸಿಬ್ಬಂದಿ ಅಗತ್ಯವಾಗಿದೆ ಇದನ್ನು ಮನಗಂಡು ಸರ್ಕಾರ ಶೀಘ್ರವಾಗಿ ಭೋದಕೇತರ ಸಿಬ್ಬಂದಿಯನ್ನು ನೇಮಕ ಮಾಡಬೇಕಿದೆ. ಸರ್ಕಾರದ ಹಲವಾರು ನಿಗಮಗಳಲ್ಲಿ ಅಧ್ಯಕ್ಷ ಸ್ಥಾನ ಖಾಲಿಯಿದೆ ಅವುಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕಿದೆ ಇಲ್ಲವಾದಲ್ಲಿ ಅಧಿಕಾರಿಗಳು ಅನುದಾನವನ್ನು ಬೇಕಾಬಿಟ್ಟಿಯಾಗಿ ಖರ್ಚು ಮಾಡುತ್ತಾರೆ ನಿಜನಾದ ಫಲಾನುಭವಿಗಳಿಗೆ ಸಿಗುವುದಿಲ್ಲ ಎಂದು ಅವರು, ಕಾಲೇಜುಗಳಲ್ಲಿ ಭೋಧನೆಯನ್ನು ಮಾಡುವ ಅತಿಥಿ ಉಪನ್ಯಾಸಕರಿಗೆ
ಪಿಂಚಿಣಿ ಇಲ್ಲ ಅವರು ಹಲೌಆರು ವರ್ಷ ಕೆಲಸ ಮಾಡಿ ಏನು ಇಲ್ಲದೆ ಮನೆಗೆ ಹೋಗಬೇಕಿದೆ. ಇದರಿಂದ ಅತಿಥಿ ಉಪನ್ಯಾಸಕರಿಗೆ ಪಿಂಚಿಣಿಯನ್ನು ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯ ಕಾರ್ಯದರ್ಶಿ ಗುರುಮೂರ್ತಿ, ಬಿ.ತಿಪ್ಪೇಸ್ವಾಮಿ. ಪಿ.ಪಾಪಣ್ಣ ,ಬಾಷಾ, ಹೇಮಣ್ಣ, ಜಯಣ್ಣ, ಚಂದ್ರಣ್ಣ, ಹಾಗೂ ಇನ್ನು ಹಲವರು ಉಪಸ್ಥಿತರಿದ್ದರು.


































