ದಾವಣಗೆರೆ : ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಸೂಚನೆಯಂತೆ ಇನ್ಮುಂದೆ ನಗರದ ವಿವಿಧೆಡೆಗೆ ನಗರ ಸಾರಿಗೆ ಸೌಲಭ್ಯ ಕಲ್ಷಿಸಲಾಗಿದೆ.
ಮಾರ್ಚ್ 3 ರಿಂದ ಬೆಳಗ್ಗೆ 7 ರಿಂದ ಸಂಜೆ 4.30 ರವರೆಗೆ ನಗರ ವ್ಯಾಪ್ತಿಯ ರೈಲ್ವೆ ಸ್ಟೇಷನ್, ಗುಂಡಿ ಸರ್ಕಲ್, ಲಕ್ಷ್ಮೀ ಫ್ಲೋರ್‍ಮಿಲ್, ಶಾರದಾಮಂದಿರ, ಎಸ್.ಎಸ್.ಬಡಾವಣೆ, ಕುಂದವಾಡಕೆರೆ ಮುಖಾಂತರ ಬಾಲಾಜಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಅಕ್ತರ್‍ರಜ್ಹಾ ವೃತ್ತದವರೆಗೆ ನಗರ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ದಾವಣಗೆರೆ ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಎನ್. ಹೆಬ್ಬಾಳ್ ತಿಳಿಸಿದ್ದಾರೆ.