ಸ್ಯಾಕ್ರಮೆಂಟೊ :ಅಮೆರಿಕದ ನೌಕಾಪಡೆಯ ಎಫ್ -35 ಯುದ್ಧ ವಿಮಾನವು ಬುಧವಾರ ಮಧ್ಯ ಕ್ಯಾಲಿಫೋರ್ನಿಯಾದ ಲೆಮೂರ್ ನೇವಲ್ ಏರ್ ಸ್ಟೇಷನ್ ಬಳಿ ಪತನಗೊಂಡಿದೆ. ವಾಯುನೆಲೆಯ ಅಧಿಕೃತ ಹೇಳಿಕೆಯ ಪ್ರಕಾರ, ವಿಮಾನ ಪತನದ ವೇಳೆ ಪೈಲಟ್ ಯಶಸ್ವಿಯಾಗಿ ಜಿಗಿದಿದ್ದು, ಸುರಕ್ಷಿತವಾಗಿದ್ದಾರೆ ಎಂದು ಮಾಹಿತಿ ಲಭಿಸಿದೆ.
ಬುಧವಾರ ಸ್ಥಳೀಯ ಕಾಲಮಾನ ಸಂಜೆ 6:30ರ ವೇಳೆಗೆ ವಿಮಾನ ಪತನಗೊಂಡಿದೆ. ವಿಮಾನ ಪತನಗೊಂಡ ಪರಿಣಾಮ ಘಟನಾ ಸ್ಥಳದಲ್ಲಿ ದಟ್ಟ ಹೊಗೆ ಕಾಣಿಸಿದೆ. ಘಟನೆಗೆ ನಿಖರ ಕಾರಣ ಏನು ಎಂಬುದನ್ನು ತನಿಖೆ ನಡೆಸಲಾಗುತ್ತಿದೆ ಎಂದು ನೌಕಾಪಡೆ ತಿಳಿಸಿದೆ.
ವಿಮಾನವು ಸ್ಟ್ರೈಕ್ ಫೈಟರ್ ಸ್ಕ್ವಾಡ್ರನ್ ವಿಎಫ್-125ಗೆ ಸೇರಿದ್ದು, ಇದನ್ನು ‘ರಫ್ ರೈಡರ್ಸ್’ ಎಂದೂ ಕರೆಯುತ್ತಾರೆ. ಈ ಸ್ಕ್ವಾಡ್ರನ್ ಫ್ಲೀಟ್ ರಿಪ್ಲೇಸ್ಮೆಂಟ್ ಸ್ಕ್ವಾಡ್ರನ್ ಆಗಿ ಕಾರ್ಯನಿರ್ವಹಿಸುತ್ತದೆ. ಜನವರಿಯಲ್ಲಿ ತರಬೇತಿ ಕಾರ್ಯಾಚರಣೆಯ ಸಮಯದಲ್ಲಿ ಅಲಾಸ್ಕಾದ ಐಲ್ಸನ್ ವಾಯುಪಡೆ ನೆಲೆಯಲ್ಲಿ ವಾಯುಪಡೆಯ F-35A ಅಪಘಾತಕ್ಕೀಡಾಯಿತು. ಆ ಘಟನೆಯಲ್ಲಿ ಕೂಡ ಪೈಲಟ್ ಸುರಕ್ಷಿತವಾಗಿ ಜಿಗಿದು ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.