ವಾಷಿಂಗ್ಟನ್ : ಇನ್‌ಸ್ಟಾಗ್ರಾಂ ಪ್ರೇಮಿಯನ್ನು ಮದುವೆಯಾಗಲು ಅಮೆರಿಕದ ಮಹಿಳೆಯೊಬ್ಬರು ಭಾರತಕ್ಕೆ ಆಗಮಿಸಿದ ಘಟನೆ ನಡೆದಿದೆ. ತನ್ನ ಪ್ರಿಯಕರನಿಗಾಗಿ ಅಮೆರಿಕದಿಂದ ಸಾವಿರಾರು ಮೈಲುಗಳಷ್ಟು ದೂರ ಪ್ರಯಾಣಿಸಿ ಆಂಧ್ರಪ್ರದೇಶದ ಹಳ್ಳಿಗೆ ಬಂದು ತಲುಪಿಸಿದ್ದಾರೆ ಎನ್ನಲಾಗಿದೆ.
ಛಾಯಾಗ್ರಾಹಕಿಯಾಗಿರುವ ಜಾಕ್ಲಿನ್ ಫೊರೆರೊ ಎಂಬಾಕೆಗೆ ಭಾರತದ ಚಂದನ್ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಿತರಾಗಿದ್ದಾರೆ. ಚಂದನ್ ಸರಳತೆಗೆ ಆಕರ್ಷಿತಳಾಗಿದ್ದ ಆಕೆ ಆತನ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಇನ್‌ಸ್ಟಾದಲ್ಲಿ ‘ಹಾಯ್’ ನಿಂದ ಪರಿಚಿತರಾದ ಇವರು, ಸತತ 14 ತಿಂಗಳು ಚಾಟ್ ಮಾಡಿಕೊಂಡಿದ್ದರು. ಕೊನೆಗೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು.
ಸಂಗೀತ, ಕಲೆ ಹಾಗು ಛಾಯಾಗ್ರಹಣದಲ್ಲಿ ಚಂದನ್‌ಗೆ ಇದ್ದ ಉತ್ಸಾಹಕ್ಕೆ ನಾನು ಆಕರ್ಷಿತಳಾದೆ. 8 ತಿಂಗಳ ಕಾಲ ಆನ್‌ಲೈನ್‌ನಲ್ಲಿ ಡೇಟಿಂಗ್ ಮಾಡಿದ್ದೆವು. ನನ್ನ ತಾಯಿಯ ಅನುಮತಿ ಪಡೆದು ನಾನು ಭಾರತಕ್ಕೆ ಬಂದಿದ್ದೇನೆ ಎಂಬುವುದಾಗಿ ಫೊರೆರೊ ತಿಳಿಸಿದ್ದಾರೆ.
ಈ ಜೋಡಿ ಈಗ ಅಮೆರಿಕದಲ್ಲಿ ತಮ್ಮ ಜೀವನವನ್ನು ಒಟ್ಟಿಗೆ ಪ್ರಾರಂಭಿಸಲು ಚಂದನ್ ವೀಸಾಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಬೃಹತ್ ಸಾಹಸದೊಂದಿಗೆ ಹೊಸ ಅಧ್ಯಾಯಕ್ಕಾಗಿ ನಾವಿಬ್ಬರೂ ಉತ್ಸುಕರಾಗಿದ್ದೇವೆಂದು ಇಬ್ಬರು ಹೇಳಿಕೊಂಡಿದ್ದಾರೆ.