ಮನೆಯಲ್ಲೇ ಸುಲಭವಾಗಿ ಸಿಗುವ ಬಾಳೆಹಣ್ಣಿನ ಸಿಪ್ಪೆಯನ್ನು ಬಳಸಿಕೊಂಡು ನೀವು ಮೊಡವೆ ಕಾಟದಿಂದ ಮುಕ್ತಿ ಪಡೆಯಬಹುದು.
ಇದಕ್ಕಾಗಿ ನೀವು ಮುಖವನ್ನು ಶುದ್ಧವಾದ ನೀರಿನಿಂದ ತೊಳೆಯಿರಿ. ನಂತರ ಒಂದು ಶುದ್ಧವಾದ ಮತ್ತು ಮೆತ್ತನೆಯ ಬಟ್ಟೆಯಿಂದ ಮೊಡವೆಗಳಿಂದ ಕೂಡಿರುವ ಚರ್ಮದ ಭಾಗವನ್ನು ನಿಧಾನವಾಗಿ ಒರೆಸಿ.
ಬಾಳೆಹಣ್ಣಿನ ಸಿಪ್ಪೆಯನ್ನು ತೆಗೆದುಕೊಳ್ಳಿ. ಅದರ ಬಿಳಿಭಾಗವನ್ನು ಚರ್ಮದ ಕಡೆಗೆ ತಿರುಗಿಸಿ ಸುಮಾರು ಹತ್ತು ನಿಮಿಷಗಳ ಕಾಲ ನಿಮ್ಮ ಚರ್ಮದ ಮೇಲೆ ನಯವಾಗಿ ಮಸಾಜ್ ಮಾಡಿ.
ಇದರಿಂದ ವೇಗವಾಗಿ ಮೊಡವೆ ಮಾಯವಾಗುತ್ತದೆ.