ಇಂಗು ಹಲವು ಆರೋಗ್ಯದ ಸಮಸ್ಯೆಗಳನ್ನು ದೂರ ಮಾಡುವ ಶಕ್ತಿ ಹೊಂದಿದೆ. ಬೇಳೆಗಳನ್ನು ಬಳಸಿ ಮಾಡುವ ಆಹಾರಗಳಿಗೆ ಇಂಗನ್ನು ಬಳಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ನಿಮ್ಮನ್ನು ಕಾಡದು.
ಹೊಟ್ಟೆಯುಬ್ಬರವಾದರೆ ಒಂದು ಲೋಟ ಮಜ್ಜಿಗೆಗೆ ಚಿಟಿಕೆ ಉಪ್ಪು ಮತ್ತು ಇಂಗು ಹಾಕಿ ಕರಗಿಸಿ ಕುಡಿಯಿರಿ. ಅರ್ಧ ಗಂಟೆಯೊಳಗೆ ಹೊಟ್ಟೆ ನೋವಿನ ಸಮಸ್ಯೆ ದೂರವಾಗುತ್ತದೆ. ಮುಟ್ಟಿನ ವೇಳೆ ಉಂಟಾಗುವ ಹೊಟ್ಟೆ ನೋವಿನ ನಿವಾರಣೆಗೆ ಮೆಂತೆ ಪುಡಿಗೆ ಚಿಟಿಕೆ ಉಪ್ಪು, ಇಂಗು ಮತ್ತು ಮಜ್ಜಿಗೆ ಸೇರಿಸಿ ಕುಡಿಯಿರಿ.