ಸೊಪ್ಪು ಆರೋಗ್ಯವನ್ನು ಕಾಪಾಡಲು ಅತ್ಯುತ್ತಮವಾದದ್ದು ಎಂಬುದು ಬಹುತೇಕ ಎಲ್ಲರಿಗೂ ತಿಳಿದಿದೆ. ಪಾಲಕ್ ಸೊಪ್ಪಿನಲ್ಲಿ ಇರುವ ಪೋಷಕಾಂಶಗಳು ಅರೋಗ್ಯದ ಸಮಸ್ಯೆಗಳನ್ನು ದೂರ ಮಾಡುತ್ತದೆ.
ಪಾಲಕ್ ಸೊಪ್ಪಿನಲ್ಲಿ ಹೇರಳವಾದ ನಾರಿನಂಶ, ಪ್ರೋಟಿನ್, ಕಬ್ಬಿಣದ ಅಂಶ ಇದ್ದು ಇದು ದೇಹದಲ್ಲಿ ರಕ್ತದ ಚಲನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮೂಳೆಗಳನ್ನು ಗಟ್ಟಿ ಮಾಡುತ್ತದೆ.
ಪಾಲಕ್ ಸೊಪ್ಪಿನಲ್ಲಿ ಸೋರಿಯಾಸಿಸ್ ಎಂಬ ಅಂಶ ಹೇರಳವಾಗಿದ್ದು, ಇದು ದೇಹದಲ್ಲಿ ಆಗುವ ತುರಿಕೆ, ಕೆಂಪು ಗುಳ್ಳೆ, ಮತ್ತು ಒಣಚರ್ಮವನ್ನು ತಡೆಯಲು ಸಹಾಯ ಮಾಡುತ್ತದೆ.
ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಬಿ ಸಿ ಇ ಪೊಟ್ಯಾಷಿಯಂ, ಕಬ್ಬಿಣ ಮತ್ತು ಒಮೆಗಾ 3 ಕೊಬ್ಬಿನ ಆಮ್ಲ ಗಳು ಹೇರಳವಾಗಿವೆ. ಕೂದಲಿನ ಬೆಳವಣಿಗೆಗೆ ಪ್ರಯೋಜನಕಾರಿ. ಅಲ್ಲದೆ ತ್ವಚೆಯ ಅಂದವನ್ನು ಕಾಪಾಡುತ್ತದೆ. ಇದನ್ನು ನಿತ್ಯ ಸೇವಿಸುವುದರಿಂದ ಹೃದಯಕ್ಕೆ ಸಂಬಂಧಪಟ್ಟ ಖಾಯಿಲೆಗಳು ದೂರವಾಗುತ್ತವೆ. ನೆನಪಿನ ಶಕ್ತಿ ಹೆಚ್ಚುತ್ತದೆ. ಕಣ್ಣಿನ ಸಮಸ್ಯೆಗಳು ಇಲ್ಲವಾಗುತ್ತವೆ.
 
				 
         
         
         
															 
                     
                     
                     
                    


































 
    
    
        