ನಿತ್ಯವೂ ಸ್ನಾನ ಮಾಡುವ ಕಾರಣ ಬಾತ್ರೂಮ್ ಬಳಕೆಯಾಗುತ್ತಿರುತ್ತವೆ. ಇದರಿಂದ ಬಾತ್ರೂಮ್ನ ಡ್ರೈನ್ನಲ್ಲಿ ಕೂದಲು ಸಿಕ್ಕಿ ಸ್ವಚ್ಛ ಮಾಡಲು ಕಷ್ಟವಾಗುತ್ತದೆ. ಹೆಚ್ಚು ಕೂದಲು ಸಿಕ್ಕಂತೆಯೇ ನೀರು ಹೋಗಲು ತೊಂದರೆಯಾಗಿ ಬ್ಲಾಕ್ ಆಗುತ್ತದೆ ಹಾಗೂ ಮತ್ತೊಂದು ಸಮಸ್ಯೆಯನ್ನು ಉಂಟು ಮಾಡುತ್ತದೆ. ಇದರಿಂದಾಗಿ ಕೊನೆಗೆ ರಾಸಾಯನಿಕ ವಸ್ತುಗಳು ಅಥವಾ ಸ್ವಚ್ಛ ಮಾಡುವವರ ಸಹಾಯವನ್ನು ಪಡೆಯಬೇಕಾಗುತ್ತದೆ .ಆದರೆ, ಅದರ ಬದಲಾಗಿ ಮನೆಯಲ್ಲಿರುವ ಕೆಲವು ವಸ್ತುಗಳನ್ನು ಬಳಸಿ ಕೆಲವೇ ನಿಮಿಷಗಳಲ್ಲಿ ಸ್ವಚ್ಛ ಮಾಡಬಹುದು. ಸೋಡಾ ಮತ್ತು ವಿನೆಗರ್ : ಮನೆಯಲ್ಲಿ ಬಾತ್ರೂಮ್ನ ಡ್ರೈನ್ನಲ್ಲಿ ಸಿಕ್ಕಿರುವ ಕೂದಲು ತೆಗೆಯಲು ಹೆಚ್ಚು ಹಣ ಖರ್ಚು ಮಾಡಬೇಕಾದ ಅವಶ್ಯಕತೆ ಇಲ್ಲ. ಕೇವಲ ಬೇಕಿಂಗ್ ಸೋಡಾ ಮತ್ತು ವಿನೆಗರ್ ಉತ್ತಮ ಸಹಾಯ ಮಾಡುತ್ತದೆ. ಮೊದಲು ಬಾತ್ರೂಮ್ ಡ್ರೈನ್ನಲ್ಲಿ ಬೇಕಿಂಗ್ ಸೋಡಾವನ್ನು ಹಾಕಬೇಕು. ನಂತರ ಅದರ ಮೇಲೆ ವಿನೆಗರ್ ಹಾಕಬೇಕು. ಸ್ವಲ್ಪ ಸಮಯ ಹಾಗೆಯೇ ಬಿಡಬೇಕು. ಸ್ವಲ್ಪ ಸಮಯದ ನಂತರ ಬಿಸಿನೀರನ್ನು ಡ್ರೈನ್ನಲ್ಲಿ ಹಾಕಬೇಕು. ಬೇಕಿಂಗ್ ಸೋಡಾ ಮತ್ತು ವಿನೆಗರ್ ಸೇರಿ ಒಂದು ರಾಸಾಯನಿಕ ಪ್ರತಿಕ್ರಿಯೆಯನ್ನು ಸೃಷ್ಟಿಸುತ್ತದೆ ಇದರಿಂದ ಸಿಕ್ಕಿರುವ ಕೂದಲು ಸುಲಭವಾಗಿ ಹೊರಟುಹೋಗುತ್ತದೆ. ಮೊದಲು ಮುಚ್ಚಿಹೋಗಿರುವ ಡ್ರೈನ್ನಲ್ಲಿ ಉಪ್ಪನ್ನು ಹಾಕಿಬಿಡಿ. ಉಪ್ಪು ಕೂದಲನ್ನು ಸಡಿಲಗೊಳಿಸುತ್ತದೆ. ಇದರಿಂದ ಕೂದಲನ್ನು ಸುಲಭವಾಗಿ ತೆಗೆಯಬಹುದು. ಅಥವಾ ಕೂದಲು ಸಿಲುಕಿರುವ ಜಾಗದಲ್ಲಿ ಕೋಕಾ ಕೋಲಾ ಹಾಕಬೇಕು. ಇದಲ್ಲಿರುವ ರಾಸಾಯನಿಕಗಳು ಕೂದಲನ್ನು ಸಡಿಲಗೊಳಿಸುತ್ತವೆ. ಇದರಿಂದ ಸುಲಭವಾಗಿ ಕೂದಲು ತೆಗೆಯಬಹುದು.
