ಚಿಕ್ಕ ವಯಸ್ಸಿನಲ್ಲಿ ಹಲವಾರು ಜನರಿಗೆ ತಲೆಕೂದಲು ಬಿಳಿಯಾಗುವುದನ್ನು ನಾವು ನೋಡಿದ್ದೇವೆ. ಇದು ಹಲವಾರು ಯುವಕರನ್ನು ಚಿಂತೆಗೀಡು ಮಾಡುತ್ತದೆ. ಇದರಿಂದ ಹಲವಾರು ಜನರು ಚಿಂತೆಗೀಡಾದರೆ.
ಇನ್ನೂ ಕೆಲವರಲ್ಲಿ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಕೆಲವರು ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಕೆಲವೊಂದು ರಾಸಾಯನಿಕಯುಕ್ತ ಕಲ್ಲರ್ ಅನ್ನು ಹಚ್ಚಿಕೊಳ್ಳುತ್ತಾರೆ. ಇದು ಕೂದಲಿಗೆ ತುಂಬಾ ಕೆಟ್ಟದ್ದು. ಆದ್ದರಿಂದ ಕೂದಲನ್ನು ಕಪ್ಪಾಗಿಸಲು ಹುಣಸೆ ಎಲೆಗಳು ತುಂಬಾ ಉಪಯುಕ್ತವಾಗಿದೆ. ಕೂದಲು ಬಿಳಿಯಾಗಲು ಆರಂಭಿಸಿದಾಗ ಈ ಎಲೆಗಳನ್ನು ಬಳಸಬಹುದು. ಏಕೆಂದರೆ ಇದರಲ್ಲಿ ಆರೋಗ್ಯವಂತ ಅಂಶಗಳಿವೆ. ಜೀವಸತ್ವ ಮತ್ತು ಖನಿಜಗಳು ಸಮೃದ್ಧವಾಗಿ ತುಂಬಿಕೊಂಡಿವೆ. ಈ ಎಲೆಗಳನ್ನು ನಾವು ಹೇಗೆ ಬಳಸಬಹುದು ಎನ್ನುವುದನ್ನು ತಿಳಿಸುತ್ತೇವೆ ಮುಂದಿನ ಮಾಹಿತಿ ಓದಿ..
ಒಂದು ಪಾತ್ರೆಯಲ್ಲಿ 5 ಕಪ್ ನೀರನ್ನು ತೆಗೆದುಕೊಳ್ಳಬೇಕು. ಅದರಲ್ಲಿ ಅರ್ಧ ಕಪ್ ಹುಣಸೆ ಎಲೆಗಳನ್ನು ಮಿಶ್ರಣ ಮಾಡಿ ಅದನ್ನು ಕುದಿಸಬೇಕು. ನಂತರ ಅದು ಬೆಚ್ಚಗಾಗುವವರೆಗೂ ಬಿಡಬೇಕು. ಹೀಗೆ ತಣ್ಣಗಾದ ದ್ರವಣವನ್ನು ಕೂದಲಿಗೆ ಹಚ್ಚಿಕೊಂಡು ಸ್ವಲ್ಪ ಸಮಯದ ನಂತರ ನೀರಿನಲ್ಲಿ ತೊಳೆದುಕೊಳ್ಳಬೇಕು.ಎಲೆಗಳನ್ನು ಹೇರ್ ಪ್ಯಾಕ್ ಮಾಡಲು ಮಿಕ್ಸರ್ ಗ್ರೈಂಡರ್ ನಲ್ಲಿ ಮೊಸೂರಿನೊಂದಿಗೆ ಕೆಲವು ಎಲೆಗಳನ್ನು ರೂಬ್ಬಿಕೊಂಡು, ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡಿ ನಂತರ ಅದು ಒಣಗಿದ ಮೇಲೆ ತಲೆಯನ್ನು ತೊಳೆದುಕೊಳ್ಳಬೇಕು. ಹುಣಸೆ ಎಲೆಯಲ್ಲಿ ನೈಸರ್ಗಿಕವಾಗಿ ಕೂದಲನ್ನು ಕಾಪಾಡುವ ಪೋಷಕಾಂಶಗಳಿವೆ. ಬಿಳಿ ಕೂದಲು ಕಪ್ಪು ಕೂದಲಾಗಿ ಬದಲಾಗುತ್ತದೆ ಹಾಗೂ ಕೂದರುವುದು ಸಹ ನಿಲ್ಲುತ್ತದೆ. ಆದ್ದರಿಂದ ಈ ಎಲೆಗಳನ್ನು ಬಳಸಿಕೊಂಡು ನಿಮ್ಮ ಬಿಳಿ ಕೂದಲನ್ನು ಕಪ್ಪು ಕೂದಲಾಗಿ ಮಾಡಿಕೊಳ್ಳಿ.