ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಗ್ರಾಮದಲ್ಲಿ ಈಚೆಗೆ ಆಯೋಜಿಸಲಾಗಿದ್ದ ಶರಣ ನುಲಿಯ ಚಂದಯ್ಯನವರ 918ನೇ ಜಯಂತ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು.
ಅಲೆಮಾರಿ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗೆ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅಭಿವೃದ್ಧಿ ನಿಗಮದಡಿ ಬರುವ 74 ಅಲೆಮಾರಿ ಜನಾಂಗದವರು ಈ ಅವಕಾಶವನ್ನು ಸದುಪಯೋಗ ಪಡೆಸಿಕೊಳ್ಳಬೇಕೆಂದು ಕರೆ ನೀಡಿದರು.
ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ ಸಮರ್ಪಕವಾಗಿ ಅನುಷ್ಟಾನ ಮಾಡದ ಕಾರಣ ರೂ.100 ಕೋಟಿ ಹಣವನ್ನು ದೇವನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ವರ್ಗಾಯಿಸಲು ಆದೇಶಿಸಲಾಗಿದೆ. ಈ ಆದೇಶವನ್ನು ರದ್ದು ಪಡಿಸಿ ಅನುದಾನ ಮತ್ತು ಗುರಿಗಳನ್ನು ಹಿಂತಿರುಗಿಸಿ ಆದೇಶ ಮಾಡಬೇಕೆಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿರುವುದಾಗಿ ತಿಳಿಸಿದರು.
ಆರ್ಥಿಕವಾಗಿ ಆಶಕ್ತರಾದ ಅಲೆಮಾರಿ ಸಮುದಾಯದ ಮಕ್ಕಳನ್ನು ವಸತಿ ಶಿಕ್ಷಣ ಸಂಸ್ಥೆ, ವಸತಿ ಶಾಲೆಗಳಿಗೆ ಪ್ರವೇಶ ಕಲ್ಪಿಸಲು ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಣದ ಮಹತ್ವದ ತಿಳುವಳಿಕೆ ನೀಡಿ ಅಲೆಮಾರಿ ಮಕ್ಕಳನ್ನು ಸುಶಿಕ್ಷಿತರನ್ನಾಗಿಸಲು ಶಾಲೆಯತ್ತ ಸೆಳೆಯುವ ಕೆಲಸ ಮಾಡಲು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೊರಮ ಸಮಾಜದ ಮುಖಂಡ ಕೆಂಚಪ್ಪ ಜಿಲ್ಲೆಯ ಅಲೆಮಾರಿಗಳಿಗೆ ಹೆಚ್ಚಿನ ಗುರಿಗಳನ್ನು ನಿಗದಿಪಡಿಸಲು ಕೋರಿದರು.
ಅಖಿಲ ಕರ್ನಾಟಕ ಕುಳುವ ಮಹಾಸಂಘದ ಪ್ರಧಾನ ಕಾರ್ಯದರ್ಶಿ ಆನಂದ್ ಕುಮಾರ್ ಏಕಲವ್ಯ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಪರಿಶಿಷ್ಟ ವರ್ಗಗಳ ಸಮಾಜ ಕಲ್ಯಾಣ ಅಧಿಕಾರಿ ನವೀನ್, ಗ್ರಾ.ಪಂ ಅಧ್ಯಕ್ಷೆ ರೇಣುಕ, ಸಮಾಜದ ಮುಖಂಡರಾದ ರಮೇಶ್, ದೇವೇಂದ್ರಪ್ಪ , ಚಂದ್ರು, ಮಧುಸೂದನ್, ಹರೀಶ್ ಮತ್ತು ಗ್ರಾಮಸ್ತರು ಉಪಸ್ಥಿತರಿದ್ದರು.