ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಪದ್ಮಾಸನದಲ್ಲಿ ಕುಳ್ಳಿರ್ದು ಆಧಾರಮಂ ಬಲಿದು
ವಾಯುವ ಊಧ್ರ್ವಕ್ಕೆ ತಿದ್ದಿ
ಮನ ಪವನ ಬಿಂದುವ ತ[ರ]ಹರವಂ ಮಾಡಿ
ಷಡಾಧಾರ ಕಮಲವನೂಧ್ರ್ವಮುಖವಂ ಮಾಡಿ
ಮೇಲಣ ಸಹಸ್ರಕಮಲಮಧ್ಯದೊಳಿಪ್ಪ ಜ್ಯೋತಿರ್ಲಿಂಗದಲ್ಲಿ
ಮನವ ನಿಲಿಸಿ, ನೆನೆನೆನೆದು
ಕೀಟಭೃಂಗನ್ಯಾಯದಂತಪ್ಪುದೆ ಯೋಗರೇಕಣ್ಣಪ್ರಿಯ ನಾಗಿನಾಥ.
-ಬಹುರೂಪಿ ಚೌಡಯ್ಯ































