ಸ್ವತಂತ್ರ ಲಿಂಗಾಯತ ಧರ್ಮದ ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ, ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.ಸ
https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ.
ವಚನ: : ಅಕ್ಷರದ ಆದಿಮೂಲವನರಿಯಬಲ್ಲರೆ
ಪ್ರಾಣಲಿಂಗದ ಅಕ್ಷರದ ಹುಟ್ಟಾವಳಿಯು ಸ್ಥೂಲದಲ್ಲಿಹುದು.
ಅಕ್ಷರದ ನಿಲವು ಸೂಕ್ಷ್ಮದಲ್ಲಿಹುದು.
ಮಾತಿಗೆ ಮೊದಲು ಶಬ್ದಮುಗ್ಧವಾಗಿರಲು
ಕಾರಣದಲ್ಲಿಹುದು.
ಇಂತೀ ತ್ರಿವಿಧಪರಿಯ ಭೇದಾಭೇದಂಗಳ ಸಂಬಂಧಿಸಿಕೊಂಡು
ಪ್ರಾಣಲಿಂಗಸಾಹಿತ್ಯವಾದ ಕಾರಣ ಭಕ್ತರ ಶ್ರೀಚರಣಕ್ಕೆ
ನಮೋ ನಮೋ ಎನುತಿರ್ದೆ ಕಾಣಾ
ಗೊಹೇಶ್ವರಪ್ರಿಯ ನಿರಾಳಲಿಂಗ.
-ಗುಹೇಶ್ವರಯ್ಯ