ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಬಿತ್ತಿದ ಬೆಳೆದ ಪೃಥ್ವಿ ನುಂಗಿದಾಗ
ಬಿತ್ತದ ವಟ್ಟ ಎಂತಪ್ಪುದೋ?
ಇಷ್ಟಲಿಂಗವ ಚಿತ್ತ ನುಂಗಿದಾಗ
ಭಕ್ತಿಯ ಹೊಲ ಎಂತಪ್ಪುದೊ?
ಮಾರ್ಗವ ಕೇಳುವ ಶಿಷ್ಯ ಪ್ರತ್ಯುತ್ತರಗೆಯ್ದಲ್ಲಿ
ಭೃತ್ಯನಹ ಪರಿಯಿನ್ನೆಂತೊ?
ಇದರಚ್ಚುಗವ ನೋಡಾ,ನಾರಾಯಣಪ್ರಿಯ ರಾಮನಾಥಾ.
-ಗುಪ್ತ ಮಂಚಣ್ಣ
































