ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಹಂದಿ ಶ್ರೀಗಂಧವ ಹೂಸಿದಡೇನು?
ಗಂಧರಾಜನಾಗಬಲ್ಲುದೆ?
ನವಿಲು ನಲಿಯಿತ್ತೆಂದಡೆ
ಕಾಕೋಳಿ ಪುಕ್ಕವ ತರಕೊಂಡಂತೆ
ಕರ್ಮಿಗಳ ಭಕ್ತಿ!
ಹೊರವೇಷದ ವಿಭೂತಿ ರುದ್ರಾಕ್ಷಿಯ ಹೂಸಿದಡೆನು
ತೆರನನರಿದು ಮರವೆಯ ಕಳದು
ಮಾತಿನಂತೆ ನೀತಿಯುಳ್ಳಡೆಅವರ ಅಜಾತರೆಂಬೆ ಕಾಣಾ! ರಾಮನಾಥ.
-ಜೇಡರ ದಾಸಿಮಯ್ಯ

































