ಮಂಗಳೂರು: ನಾಡಿನ ಹಿರಿಯ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ನಾ ಡಿಸೋಜ ಅವರು ನಿಧನರಾಗಿದ್ದಾರೆ.
ಅನಾರೋಗ್ಯದ ಕಾರಣದಿಂದಾಗಿ ಮಂಗಳೂರಿನ ಫಾದರ್ ಮುಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮಂಗಳೂರಿನಿಂದ ನಾಳೆ ಮೂರುಗಂಟೆಗೆ ಸಾಗರಕ್ಕೆ ಡಿಸೋಜ ಅವರ ಪಾರ್ಥೀವ ಶರೀರ ತಲುಪಲಿದ್ದು, ಜನವರಿ. 7ರಂದು ಅವರ ಅಂತ್ಯಕ್ರಿಯೆ ಸಾಗರದಲ್ಲಿ ನೆರವೇರಲಿದೆ.