ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದ ನಟ ದರ್ಶನ್ 5 ತಿಂಗಳ ಕಾಲ ಸೆರೆಮನೆ ವಾಸ ಅನುಭವಿಸಿದರು. ಹೊರಗೆ ಐಷಾರಾಮಿಯಾಗಿ ಜೀವನ ಕಂಡ ದರ್ಶನ್, ಜೈಲಲ್ಲಿ ನಿಲ್ಲೋಕು, ಕೂರೋಕು ಆಗದೆ ಪರದಾಡಿದ್ರು. ಆಗ ಪತಿ ದರ್ಶನ್ ಬೆಂಬಲಕ್ಕೆ ನಿಂತವರೇ ಪತ್ನಿ ವಿಜಯಲಕ್ಷ್ಮಿ. ಪರಸ್ತ್ರೀ ವಿಚಾರಕ್ಕೆ ಗಂಡ ಜೈಲು ಪಾಲಾಗಿದ್ದರು, ಗಂಡನ ಪರ ಕಾನೂನು ಹೋರಾಟ ಮಾಡಿದರು. ಪ್ರತಿ ವಾರ ಜೈಲಿಗೆ ಹೋಗಿ ಪತಿಯ ಯೋಗಕ್ಷೇಮ ವಿಚಾರಿಸಿದರು.
ಕೋರ್ಟು-ಕಚೇರಿ ಅಲೆದು, ಗುಡಿ-ಗೋಪುರ ಸುತ್ತಿ ಗಂಡನಿಗಾಗಿ ಹರಕೆ ಹೊತ್ತರು. ಕೊನೆಗೂ ಕಾನೂನು ಹೋರಾಟದಲ್ಲಿ ಗೆದ್ದು ದರ್ಶನ್ ಅವರನ್ನು ಜೈಲಿಂದ ಹೊರಗೆ ತಂದರು ಇದು ವಿಜಯಲಕ್ಷ್ಮಿ ಗೆಲುವೇ ಆಗಿತ್ತು. ದರ್ಶನ್ ಜೈಲಿಂದ ಬಂದ ಮೇಲೆ ಪತ್ನಿ ವಿಜಯಲಕ್ಷ್ಮಿ ತನ್ನ ಗಂಡನ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಎಲ್ಲವನ್ನೂ ಕಂಟ್ರೋಲ್ ಮಾಡ್ತಿದ್ದಾರೆ ಎನ್ನಲಾಗುತ್ತಿದೆ.
ಕೊಲೆ ಕೇಸ್ ಮೇಲೆ ನಟ ದರ್ಶನ್ ಜೈಲು ಸೇರಿದ ಮೇಲೆ ಮುಗೀತು ಈ ನಟನ ಸಿನಿ ಕೆರಿಯರ್ ಎನ್ನುವ ಮಾತು ಕೇಳಿ ಬಂದಿತ್ತು. ಜೈಲಿಂದ ಹೊರಗೆ ಬಂದ ಮೇಲೆ ಅಭಿಮಾನಿಗಳು ದರ್ಶನ್ನನ್ನು ಒಪ್ಪಿಕೊಂಡ ರೀತಿ ನೋಡಿ ಅನೇಕರು ಶಾಕ್ ಆಗಿದ್ದಾರೆ. ಅದೇ ಅಭಿಮಾನ, ಅದೇ ಕ್ರೇಜ್ ಈಗಲೂ ಇದೆ. ಇದನ್ನೆಲ್ಲಾ ನೋಡಿದ ವಿಜಯಲಕ್ಷ್ಮಿ ಗಂಡನ ತಪ್ಪು ಮಾಡದಂತೆ ತಡೆಯಲು ಆತನ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ.