ಬೆಂಗಳೂರು : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾಷಣ ಓದದೇ ಸಂವಿಧಾನ ಉಲ್ಲಂಘಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ. ವಿಧಾನಸೌಧದಲ್ಲಿ ಈ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ ಸರ್ಕಾರ ರೆಡಿ ಮಾಡಿದ ಭಾಷಣವನ್ನ ರಾಜ್ಯಪಾಲರು ಓದಬೇಕು. ವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಓದಬೇಕು. ರಾಜ್ಯಪಾಲರು ಭಾಷಣ ಓದದೇ ಸಂವಿಧಾನ ಉಲ್ಲಂಘಿಸಿದ್ದಾರೆ. ಅವರು ಕೇಂದ್ರ ಸರ್ಕಾರ ಕೈಗೊಂಬೆಯಂತೆ ವರ್ತಿಸಿದ್ದಾರೆ ಎಂದರು.
ರಾಜ್ಯಪಾಲರ ಈ ನಡೆ ಸಂವಿಧಾನ ಬಾಹಿರ. ರಾಜ್ಯಪಾಲರು ತಮ್ಮ ಕರ್ತವ್ಯ ಪಾಲನೆ ಮಾಡಿಲ್ಲ ಎಂದರು. ರಾಜ್ಯಪಾಲರು ಅವರು ರೆಡಿ ಮಾಡಿದ ಭಾಷಣಗಳನ್ನು ಓದುವ ಹಾಗಿಲ್ಲ, ಸರ್ಕಾರ ರೆಡಿ ಮಾಡಿದ ಭಾಷಣ ಓದಬೇಕು . ರಾಜ್ಯಪಾಲರ ನಡೆ ಖಂಡಿಸಿ ಪ್ರತಿಭಟನೆ ನಡೆಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ.
ಇಂದು ವಿಧಾನಸೌಧಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆಗಮಿಸುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಅವರಿಗೆ ಸ್ವಾಗತ ಕೋರಿದ್ದಾರೆ . ಬಳಿಕ ಕೇವಲ ಎರಡೇ ಮಾತಿನಲ್ಲಿ ಭಾಷಣ ಮುಗಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತೆರಳಿದ್ದು, ಕಾಂಗ್ರೆಸ್ ನಾಯಕರು ಧಿಕ್ಕಾರ ಕೂಗಿದ್ದಾರೆ.ಭಾಷಣ ಮಾಡದೇ ಕೇವಲ 2 ಸಾಲಿನಲ್ಲಿ ಮಾತು ಮುಗಿಸಿ ಅವರು ತೆರಳಿದ್ದಾರೆ. ಸರ್ಕಾರ ಕೊಟ್ಟಂತಹ ಭಾಷಣ ಓದದೇ ಕೇವಲ 2 ಮಾತಿನಲ್ಲಿ ಶುಭ ಕೋರಿ ಅವರು ತೆರಳಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿ ಧಿಕ್ಕಾರ ಕೂಗಿದ್ದಾರೆ. ಬಿ.ಕೆ ಹರಿಪ್ರಸಾದ್ ಅವರು ರಾಜ್ಯಪಾಲರನ್ನು ಅಡ್ಡಗಟ್ಟಿ ಭಾಷಣವನ್ನು ಸಂಪೂರ್ಣವಾಗಿ ಓದುವಂತೆ ಆಗ್ರಹಿಸಿದ್ದಾರೆ.
































