ವಿಮಾನ ಹಾರಾಟದ ಮಧ್ಯೆ ಮಹಿಳೆಯೊಬ್ಬಳು ಸಂಪೂರ್ಣವಾಗಿ ವಿವಸ್ತ್ರಗೊಂಡು ವಿಮಾನದೊಳಗೆ ಗದ್ದಲ ಸೃಷ್ಟಿಸಿದ್ದಾಳೆ.
ಈಕೆಯ ಈ ವರ್ತನೆಯಿಂದ ಸಹ ಪ್ರಯಾಣಿಕರು ಬೆಚ್ಚಿ ಬಿದ್ದಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗುತ್ತಿದೆ. ಅಮೆರಿಕದಲ್ಲಿ ಈ ಘಟನೆ ನಡೆದಿದ್ದು, ಓರ್ವ ಮಹಿಳೆ ವಿವಸ್ತ್ರಗೊಂಡು ಓಡಾಡುವ ಮೂಲಕ ವಿಮಾನದೊಳಗೆ ಗದ್ದಲ ಸೃಷ್ಟಿಸಿದ್ದಾಳೆ.
ಹೂಸ್ಟನ್ನಿಂದ ಫೀನಿಕ್ಸ್ ಗೆ ಹೊರಟಿದ್ದ ಸೌತ್ ವೆಸ್ಟ್ ಏರ್ ಲೈನ್ಸ್ ವಿಮಾನದಲ್ಲಿ ಓರ್ವ ಮಹಿಳೆ ಸಂಪೂರ್ಣವಾಗಿ ತನ್ನ ಬಟ್ಟೆ ಬಿಚ್ಚಿ ಗದ್ದಲ ಸೃಷ್ಟಿಸಿದ್ದಾಳೆ.
ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಈ ಘಟನೆ ಸಂಭವಿಸಿದ್ದು, ವಿಮಾನ ಹಾರಾಟದ ಮಧ್ಯೆ ಆ ಮಹಿಳೆ ಪ್ರಯಾಣಿಕರು ಕಿರುಚುತ್ತಾ, ತನ್ನ ಟಾಪ್ ಮತ್ತು ಪ್ಯಾಂಟ್ ತೆಗೆದು ಕಾಕ್ಪಿಟ್ಗೆ ಪ್ರವೇಶಿಸಲು ಪ್ರಯತ್ನಿಸಿದ್ದಾಳೆ. ಮತ್ತು ಸುಮಾರು 30 ನಿಮಿಷಗಳ ಕಾಲ ಬೆತ್ತಲಾಗಿಯೇ ಸಹ ಪ್ರಯಾಣಿಕರ ಮುಂದೆ ಓಡಾಡಿದ್ದಾಳೆ ಮತ್ತು ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾಳೆ.
ಪ್ರಯಾಣಿಕರೊಬ್ಬರು ಇಡೀ ಘಟನೆಯನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ.