ನವದೆಹಲಿ : ವಿರಾಟ್ ಕೊಹ್ಲಿ ಇಂದಿನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದು , ಈಗ ಅವರ ಸೋದರಳಿಯ ಆರ್ಯವೀರ್ ಕೊಹ್ಲಿ ಅವರ ಪರಂಪರೆಯನ್ನು ಮುಂದುವರೆಸುತ್ತಿದ್ದಾರೆ, ಅವರು ವಿರಾಟ್ ಅವರ ಹಿರಿಯ ಸಹೋದರ ವಿಕಾಸ್ ಅವರ ಮಗ. ದೆಹಲಿಯಲ್ಲಿ ನಡೆಯಲಿರುವ ಡಿಪಿಎಲ್ ಸೀಸನ್-2 ಗೆ ಸೌತ್ ದಿಲ್ಲಿ ಸೂಪರ್ ಸ್ಟಾರ್ಸ್ ಫ್ರಾಂಚೈಸಿ ಆರ್ಯವೀರ್ ಅವರನ್ನು ಖರೀದಿಸಿದೆ.
ವಿಕಾಸ್ ಕೊಹ್ಲಿಯವರ 15 ವರ್ಷದ ಮಗ ಡಿಪಿಎಲ್ 2025 ಹರಾಜಿಗೆ ನೋಂದಾಯಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ವಿರಾಟ್ ಗಿಂತ ಭಿನ್ನವಾಗಿ, ಆರ್ಯವೀರ್ ಬೌಲಿಂಗ್ ಅನ್ನು ತಮ್ಮ ವೃತ್ತಿಜೀವನವನ್ನಾಗಿ ಮಾಡಿಕೊಂಡಿದ್ದಾರೆ. ಅವರು ಲೆಗ್ ಸ್ಪಿನ್ನರ್ ಆಗಿದ್ದು, ಪಶ್ಚಿಮ ದೆಹಲಿ ಕ್ರಿಕೆಟ್ ಅಕಾಡೆಮಿಯಲ್ಲಿ ರಾಜ್ ಕುಮಾರ್ ಶರ್ಮಾ ಅವರಿಂದ ತರಬೇತಿ ಪಡೆಯುತ್ತಾರೆ. ವಿರಾಟ್ ಕೊಹ್ಲಿ ತಮ್ಮ ಆರಂಭಿಕ ದಿನಗಳಲ್ಲಿ ತರಬೇತಿ ಪಡೆದ ಅದೇ ತರಬೇತುದಾರ ಇವರು .
ಈ ಹಿಂದೆ ದೆಹಲಿ ಅಂಡರ್-16 ತಂಡದಲ್ಲಿ ಆರ್ಯವೀರ್ ಕೊಹ್ಲಿ ಕಾಣಿಸಿಕೊಂಡಿದ್ದರು. ಅಲ್ಲೂ ಕೂಡ ಉತ್ತಮ ಸ್ಪಿನ್ ಬೌಲಿಂಗ್ನೊಂದಿಗೆ ಗಮನ ಸೆಳೆದಿದ್ದರು. ಇದೀಗ ಸೌತ್ ದಿಲ್ಲಿ ಸೂಪರ್ ಸ್ಟಾರ್ಸ್ ಫ್ರಾಂಚೈಸಿಯು 15 ವರ್ಷದ ಆರ್ಯವೀರ್ ಅವರನ್ನು ದೆಹಲಿ ಪ್ರೀಮಿಯರ್ ಲೀಗ್ನ ಎರಡನೇ ಆವೃತ್ತಿಗೆ ಆಯ್ಕೆ ಮಾಡಿಕೊಂಡಿದ್ದಾರೆ.