ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಬಹಳ ಡಿಮ್ಯಾಂಡ್. ಇದರ ಜ್ಯೂಸಿಗೆ ವಿಶೇಷ ಬೇಡಿಕೆ. ಅದರಲ್ಲೂ ದಣಿದಿದ್ದವರು ಕಲ್ಲಂಗಡಿ ಹಣ್ಣನ್ನು ಸವಿಯಲು ಮುಂದಾಗುತ್ತಾರೆ. ಆದರೆ ಫ್ರಿಡ್ಜ್ನಲ್ಲಿಟ್ಟು ಕೊಂಚ ತಂಪಾದ ಬಳಿಕ ತಿನ್ನುತ್ತೇನೆ ಎನ್ನುವವರು ಅಂತಹ ತಪ್ಪ ಮಾಡಬೇಕು. ಯಾಕಂದ್ರೆ ಆರೋಗ್ಯ ಸಮಸ್ಯೆ ನಿಮ್ಮನ್ನು ಭಾದಿಸಬಹುದು.
ಕಲ್ಲಂಗಡಿ ಹಣ್ಣಿನಲ್ಲಿ ಸಿಟ್ರುಲಿನ್ ಅಂಶವನ್ನು ಹೊಂದಿದೆ. ಅಮೈನೋ ಅಮ್ಲಜನಕ ಇದರಲ್ಲಿದೆ. ಮಿಟಮಿನ್ಎ ಮತ್ತು ಸಿ ಜೊತೆಗೆ ಮಿಟಮಿನ್ ಬಿ 6 ಹೊಂದಿದೆ. ಇದರಲ್ಲಿ ನೈಟ್ರಿಕ್ ಆಕ್ಸೈಡ್ 6 ಇರೋ ಕಾರಣ ಇದನ್ನು ಸೇವಿಸಿದರೆ ಆರೋಗ್ಯಕ್ಕೆ ಲಾಭವಿದೆ.
ಕಡಿಮೆ ಕ್ಯಾಲೋರಿಯನ್ನು ಹೊಂದಿರುವ ಈ ಹಣ್ಣು, ದೇಹದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಡಯೆಟ್ ಮಾಡುವವರಿಗೆ ಇದು ಬೆಸ್ಟ್ ಅಂದರೆ ತಪ್ಪಿಲ್ಲ.
ಮುಖ್ಯ ವಿಚಾರವೆಂದರೆ ಕಲ್ಲಂಗಡಿ ಹಣ್ಣನ್ನು ರೆಫ್ರಿಜರೇಟರ್ನಲ್ಲಿ ಇಡುವುದರಿಂದ ಪೌಷ್ಟಿಕಾಂಶದ ಮೌಲ್ಯ ಕಡಿಮೆಯಾಗುತ್ತದೆ. ಇದನ್ನು ಸೇವಿಸುದರಿಂದ ಅದರಲ್ಲಿ ಸರಿಯಾದ ಪೋಷಕಾಂಶ ಸಿಗದೇ ಇರಬಹುದು. ಇನ್ನು ಫ್ರಿಡ್ಜ್ನಲ್ಲಿಟ್ಟ ಕಾರಣ ಶೀತ ಸೇರಿ ಆರೋಗ್ಯ ಸಮಸ್ಯೆ ಕಾಡಬಹುದು. ಹಾಗಾಗಿ ಫ್ರೆಶ್ ಕಲ್ಲಂಗಡಿ ಹಣ್ಣನ್ನು ಸೇವಿಸುವುದು ಉತ್ತಮ.